

ಲೋಕಾಪುರ : ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜಯತೀರ್ಥರ ಆರಾಧನೆ ಜರುಗಿತು.
ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ವೃಂದಾವನಕ್ಕೆ ಲ ಪಂಚಾಮೃತ, ಅಲಂಕಾರ, ಮಹಾಪೂಜೆ ಜರುಗಿದವು.
ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಅನಂತರ ಶ್ರೀಮಠದ ಒಳಾವರಣದಲ್ಲಿ ಟೀಕಾರಾಯರು ರಚಿಸಿದ ಗ್ರಂಥ ಹಾಗೂ ಭಾವಚಿತ್ರಗಳನ್ನಿಟ್ಟು ಅಲಂಕೃತ ರಥೋತ್ಸವ ನಡೆಸಲಾಯಿತು. ರಥೋತ್ಸವ ಸಮಯದಲ್ಲಿ ದೇವರ ನಾಮಗಳ ಸುಮಧುರ ಕಂಠದ ಹಾಡುಗಳು ಮಾರ್ದನಿಸಿದವು.
ಪ್ರವಚನ ನೀಡಿದ ಸುಶೀಲೇಂದ್ರಚಾರ್ಯ ಗೋಠೆ, ಗುರುವರ್ಯರು ಮಾಧ್ವ ಸಾಹಿತ್ಯ ಪ್ರಪಂಚಕ್ಕೆ ಸೂರ್ಯನಂತೆ ಪ್ರಕಾಶ ಮಾನರಾಗಿ ಹೊಳೆಯುತ್ತಿರುವವರು. ಅವರ ನುಡಿಗಳು ನಮಗೆ ಕಾಮಧೇನು ಇದ್ದಂತೆ. ಸನಾತನ ಹಿಂದು ಪರಂಪರೆಯ ಯತಿಶ್ರೇಷ್ಠರಲ್ಲಿ ಓರ್ವರಾಗಿದ್ದಾರೆ. ಅವರು ರಚಿಸಿದ ಗ್ರಂಥಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು.
ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ವಸಂತರಾವ ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ, ಹಿರಿಯರಾದ ಗುರುರಾಜ ಜೋಶಿ, ಬಿ.ಎಲ್. ಬಬಲಾದಿ, ವೆಂಕಟೇಶ ಕಟ್ಟಿ, ಕೆ.ವಿ. ಕುಲಕರ್ಣಿ, ಶ್ರೀನಿವಾಸರಾವ ಕುಲಕರ್ಣಿ, ಭೀಮಣ್ಣ ಜೋಶಿ, ಗುರುಸಾರ್ವಭೌಮ ಯುವಕ ಮಂಡಳ ಅಧ್ಯಕ್ಷ ಪ್ರವೀಣ ಸೋಮಾಪುರ, ಕಾರ್ಯದರ್ಶಿ ರಾಹುಲ ಗುಡೂರ, ಸಂತೋಷ ದೇಶಪಾಂಡೆ, ವಿಜಯಕುಮಾರ ದೇಶಪಾಂಡೆ, ನಾಗರಾಜ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ, ರಾಘವೇಂದ್ರ ಗೋಠೆ, ಪದ್ದು ದೇಶಪಾಂಡೆ, ಪ್ರಸಾದ ಸೋಮಾಪುರ, ಗಾಯತ್ರಿ ಭಜನಾ ಮಂಡಳ, ವಿಪ್ರ ಸಮಾಜದ ಸರ್ವ ಸದಸ್ಯರು, ಸ್ಥಳೀಯರು ಇದ್ದರು.