ಜಯತೀರ್ಥರ ಆರಾಧನಾ ಮಹೋತ್ಸವ

16-SVR-2
Published on

ಸವಣೂರ: ಪಟ್ಟಣದ ಶ್ರೀಸತ್ಯಬೋಧ ಸ್ವಾಮೀಜಿಗಳ ಮೂಲವೃಂದಾವನ ಸನ್ನಿಧಾನದಲ್ಲಿ ಶ್ರೀಮದ್ ಜಯತೀರ್ಥರ ಆರಾಧನಾ ಮಹೋತ್ಸವ ಮಂಗಳವಾರ ಜರುಗಿತು. ಪಂಚಾಮೃತ ಅಭಿಷೇಕ, ಅಲಂಕಾರ, ರಥೋತ್ಸವ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಯಿತು.

ಚಾತುರ್ಮಾಸ್ಯದ ಅಂಗವಾಗಿ ಏರ್ಪಡಿಸಿರುವ ಶ್ರವಣ ಯಜ್ಞ ಕಾರ್ಯಕ್ರಮದಡಿ ಭಾಗವತದ ಪ್ರಥಮ ಸ್ಕಂದದ ಪ್ರವಚನವನ್ನು ವಿದ್ವಾನ್ ರಮೇಶ ಆಚಾರ್ಯ ಹಿಪ್ಪರಗಿ ನಡೆಸಿಕೊಟ್ಟರು. ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ ಆಚಾರ್ಯ ರಾಯಚೂರು ಹಾಗೂ ಅಭಿಷೇಕ ಆಚಾರ್ಯ ರಾಯಚೂರು ನೇತೃತ್ವ ವಹಿಸಿದ್ದರು.

ಸಂಜೆ ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವಾ, ತೊಟ್ಟಿಲು ಉತ್ಸವ ಫಲಮಂತ್ರಾಕ್ಷತೆ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಅರ್ಚಕರಾದ ರಂಗಾಚಾರ್ಯ ರಾಯಚೂರ, ಪ್ರವೀಣಾಚಾರ ಕುಲಕರ್ಣಿ, ಶ್ರೀನಿವಾಸ ಖಾರದ, ಪಾಂಡುರಂಗ ರಿತ್ತಿ, ರವಿ ಖಾರದ, ಆಯಿ ಆಚಾರ್ಯರು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net