ಬೆಂಗಳೂರು: ಜಯನಗರ 8ನೇ ಹಂತದಲ್ಲಿರುವ ಶ್ರೀ ವಿನಾಯಕ ಮಿತ್ರ ಮಂಡಳಿ ಮತ್ತು ಶ್ರೀ ಜಯರಾಮ ಸೇವಾ ಮಂಡಲಿ ಸಹಯೋಗದಲ್ಲಿ ಲಕ್ಷ ದೀಪೋತ್ಸವ ಆಯೋಜಿಸಲಾಗಿದೆ.
ಕಾರ್ತೀಕ ಮಾಸದ ಅಂಗವಾಗಿ ಆಯೋಜಿಸಲಾದ ದೀಪೋತ್ಸವವು ಸಂಜೆ 6 ರಿಂದ ಆರಂಭವಾಗಲಿದ್ದು ಭಕ್ತಾದಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಇದೇ ವೇಳೆ ತಾಳವಾದ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಮಹಿಳೆಯರಿಗಾಗಿ ವಿಶೇಷ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ: 98451 52791 ಸಂಪರ್ಕಿಸಬಹುದು.