

ಹೊಸನಗರ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ವಿ.ಜಯರಾಮ್ ಸತತ 8ನೇ ಬಾರಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗುರುಮೂರ್ತಿ ಸಹ ಅವಿರೋಧವಾಗಿ ಆಯ್ಕೆಗೊಂಡರು.
ನಿರ್ದೇಶಕರಾದ ವಾಲೇಮನೆ ನಾಗೇಶ್, ಈಶ್ವರಪ್ಪ ಗೌಡ, ಮಳಲಿ ಸತೀಶ ಗೌಡ, ದೇವೇಂದ್ರಪ್ಪ, ಹೂವಮ್ಮ, ಹೇಮಾವತಿ, ಮಹೇಂದ್ರ, ನರೇಂದ್ರ, ವೇದಾಂತಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಳಗುಂದ ಶ್ರೀಪತಿ ಹಾಗೂ ಕೆಸುವಿನಮನೆ ರತ್ನಾಕರ ಉಪಸ್ಥಿತರಿದ್ದರು.