ಕಳಿಹಿತ್ಲು ಪ್ರದೇಶಕ್ಕೆ ಜಯಪ್ರಕಾಶ ಹೆಗ್ಡೆ ಭೇಟಿ

BYN-Aug08-3- Kota & Hegde Visit
Published on

ಬೈಂದೂರು: ಇತ್ತೀಚೆಗೆ ಮಳೆಯಿಂದ ದೋಣಿಗಳು ಸಮುದ್ರ ಪಾಲಾದ ಶಿರೂರು ಕಳಿಹಿತ್ಲು ಪ್ರದೇಶಕ್ಕೆ ಸೋಮವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮೀನುಗಾರಿಕಾ ದೋಣಿಗಳನ್ನು ವೀಕ್ಷಿಸಿದರು.

ಬೈಂದೂರು ತಹಸೀಲ್ದಾರ್ ಕಿರಣ್ ಗೌರಯ್ಯ, ಮೀನುಗಾರಿಕಾ ನಿರ್ದೇಶಕ ಶಿವಕುಮಾರ್, ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತಾ, ಗಣೇಶ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಉಪತಹಸೀಲ್ದಾರ್ ಭೀಮಪ್ಪ ಎಚ್.ಬಿಲ್ಲಾರ್, ಮೀನುಗಾರ ಮುಖಂಡ ಜಗನ್ನಾಥ ಮೊಗವೀರ, ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುತ್ತಯ್ಯ ಖಾರ್ವಿ, ಉಪ್ಪುಂದ ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ, ನಾಗರಾಜ ಖಾರ್ವಿ ಬಿಎಚ್‌ಪಿ, ಕುಮಾರ್ ಖಾರ್ವಿ, ಉಪ್ಪುಂದ ಗ್ರಾಪಂ ಸದಸ್ಯ ನಾಗರಾಜ ಖಾರ್ವಿ, ಶಿರೂರು ಗ್ರಾಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ, ಸದಾಶಿವ ಡಿ.ಪಡುವರಿ, ತುಳಸಿದಾಸ್ ಮೊಗೇರ್, ಕಂದಾಯ ನಿರೀಕ್ಷಕ ಮಂಜು ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net