ಮದುವೆ ಮನೆಯಲ್ಲಿ ಸಾಹಿತ್ಯಾಕ್ಷತೆ

web 1
Published on

ಬಣಕಲ್: ನೂತನ ವಧುವರರು ಸಾಮರಸ್ಯದಿಂದ ಬದುಕಿದರೆ ಮದುವೆಗೊಂದು ಅರ್ಥ ಬರುತ್ತದೆ ಎಂದು ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.

ಇಂದಿರಾನಗರದ ಲಲಿತಮ್ಮ, ಮುಳ್ಳಯ್ಯ ಅವರ ಮನೆಯಲ್ಲಿ ಜಯಪಾಲ್ ಮತ್ತು ಅನಿತಾ ಮದುವೆ ಸಂಭ್ರಮದಲ್ಲಿ ಮೂಡಿಗೆರೆ ಮತ್ತು ಬಣಕಲ್ ಕಸಾಪದಿಂದ ಆಯೋಜಿಸಿದ್ದ ಸಾಹಿತ್ಯಾಕ್ಷತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮದುವೆ ವಿಜೃಂಭಣೆಯಿಂದ ಮಾಡುವುದಲ್ಲ. ಬದುಕು ವಿಜೃಂಭಣೆಯಾಗಿರಬೇಕು. ಸತಿಪತಿ ಪರಸ್ಪರ ಅರ್ಥೈಸಿಕೊಂಡು ಜೀವನ ಸಾಗಿಸಬೇಕು. ಸತಿಪತಿಗಳು ಸಂಸಾರ ಬಂಡಿಯ ಎರಡು ಚಕ್ರಗಳು. ಜೀವನದ ಏರಿಳಿತಗಳನ್ನು ಸಮನಾಗಿ ಕಂಡು ವೈವಾಹಿಕ ಜೀವನ ಸಾರ್ಥಕಗೊಳಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net