ಶ್ರೀವೀರಭದ್ರ ದೇವರ ಜಯಂತ್ಯುತ್ಸವ

veerabhadra
Published on

ಉಪ್ಪಿನ ಬೆಟಗೇರಿ: ಭಕ್ತಗಣದ ಬದುಕಿನಲ್ಲಿ ಪರಿಶುದ್ಧತೆಯನ್ನು ಹುಟ್ಟುಹಾಕಿ ನೈತಿಕ ಬಲವನ್ನು ಅನುಗ್ರಹಿಸುವ ಶ್ರೀವೀರಭದ್ರ ದೇವರು ಶಿವ ಸಂಸ್ಕೃತಿಯ ಸಂವರ್ಧಕರೂ ಆಗಿದ್ದಾರೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಅಮ್ಮಿನಬಾವಿ ಗ್ರಾಮದ ಶ್ರೀವೀರಭದ್ರ ದೇವರ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಧರ್ಮದ ರಹದಾರಿಯಲ್ಲಿ ಮುನ್ನಡೆಯಲು ವೀರಭದ್ರ ದೇವರ ಕೃಪಾಕಾರುಣ್ಯ ಬೆಳಕು ನೀಡುತ್ತದೆ ಎಂದರು.

ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ಉಪಾಧ್ಯಕ್ಷ ಡಾ.ಗುರುಮೂರ್ತಿ ಯರಗಂಬಳಿಮಠ, ಅಮ್ಮಿನಬಾವಿಯ ಶ್ರೀವೀರಭದ್ರೇಶ್ವರ ದೇವಾಲಯದ ಪ್ರಧಾನ ಅರ್ಚಕ ವೀರಯ್ಯ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ರುದ್ರಪ್ಪ ಕಂಬಾರ, ರೇಣುಕಾಚಾರ್ಯ ಹಿರೇಮಠ, ಗಿರೀಶ ಗದಗಿನ, ಮೃತ್ಯುಂಜಯ ಹಿರೇಮಠ, ನೀಲಪ್ಪ ಹುಲ್ಲೂರ, ಗುರುಬಸವರಾಜ ಹಿರೇಮಠ, ಚೆನ್ನಪ್ಪ ಹೂಲಿ, ಸಮೃದ್ಧ ಹಿರೇಮಠ, ಸಿದ್ಧಾರೂಢ ತೇಗೂರ, ಪ್ರೀತಂ ಯಡಳ್ಳಿಮಠ, ಈರಣ್ಣ ದೊಡವಾಡ, ಭರತ್ ಹಿಡಕಿಮಠ, ಅಮೋಘ ಯಡಳ್ಳಿಮಠ, ಬಸವರಾಜ ಪತ್ತಾರ ಇತರರು ಇದ್ದರು. ಜಯಂತಿ ಅಂಗವಾಗಿ ಶ್ರೀವೀರಭದ್ರ ದೇವರಿಗೆ ರುದ್ರಾಭಿಷೇಕ ಮಹಾಪೂಜೆ, ಆರತಿ, ಪಲ್ಲಕ್ಕಿ ಸೇವೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net