

ಗಂಗಾವತಿ: ತಾಲೂಕಿನ ಮರಕುಂಬಿಯ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾಡಳಿತ ಮಂಡಳಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶಾಲೆ ಮುಖ್ಯಶಿಕ್ಷಕ ಗೋಪಾಲಕೃಷ್ಣ ಕುಲ್ಕರ್ಣಿ ಮಾತನಾಡಿ, ಇಂದಿನ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಹಿಂದಿನ ಸಂಪ್ರದಾಯ, ಸಂಸ್ಕೃತಿ ತಿಳಿಸುವ ಅಗತ್ಯವಿದ್ದು, ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶ ಸಾರ್ವಕಾಲಿಕ ಮೌಲ್ಯಯುತವಾಗಿವೆ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಬೇಕಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರು ಸಹಕರಿಸಬೇಕೆಂದರು.
ಈಡಿಗ ಸಮುದಾಯದ ಮುಖಂಡ ಈ. ಶರಣಪ್ಪ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷೆ ಹನುಮಂತಿ ಯಮನೂರಪ್ಪ, ಉಪಾಧ್ಯಕ್ಷ ತಿಪ್ಪಣ್ಣ ಮಡಿವಾಳರ್, ಸದಸ್ಯರಾದ ಮೌನೇಶ, ಮಾರುತಿ, ಪ್ರಮುಖರಾದ ಹುಲುಗಪ್ಪ ದಳಪತಿ, ಯಂಕಯ್ಯ, ಯಮನೂರಪ್ಪ, ಯಮನೂರಸಾಬ, ಬುಶಪ್ಪ, ಶಿಕ್ಷಕರು, ಗ್ರಾಮದ ಯುವಕರು ಮತ್ತು ಹಳೇ ವಿದ್ಯಾರ್ಥಿಗಳಿದ್ದರು.