

ಮಸ್ಕಿ: ದಾರ್ಶನಿಕರ ಸಂದೇಶಗಳು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಸರ್ಕಾರ ಶರಣರ ಜಯಂತಿ ಆಚರಿಸುತ್ತದೆ ಎಂದು ತಹಸೀಲ್ದಾರ್ ಡಾ.ಕೆ.ಮಲ್ಲಪ್ಪ ಯರಗೋಳ ಹೇಳಿದರು.
ಇದನ್ನೂ ಓದಿ:ಶರಣರ ಜಯಂತಿಯಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ
ಮಹನೀಯರ ಜಯಂತಿ ನಿಮಿತ್ತ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮಹನೀಯರ ಜಯಂತಿ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲರೂ ಭಾಗವಹಿಸಬೇಕು. ಮಾ.12ರಂದು ತಾಲೂಕು ಆಡಳಿತದಿಂದ ರೇಣುಕಾಚಾರ್ಯ ಜಯಂತಿ, 14 ರಂದು ಯೋಗಿನಾರಾಯಣ ಜಯಂತಿ, 28ರಂದು ಅಗ್ನಿ ಬನ್ನಿರಾಯ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಜಂಗಮ ಸಮಾಜದ ಅಧ್ಯಕ್ಷ ಕರಿಬಸಯ್ಯಸ್ವಾಮಿ, ಪ್ರಮುಖರಾದ ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಸಿದ್ದಯ್ಯ ಹೆಸರೂರು ಹಿರೇಮಠ, ಸಿದ್ದಲಿಂಗಯ್ಯ ಸೊಪ್ಪಿಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಅಮರೇಶ ಸೊಪ್ಪಿಮಠ, ಮಲ್ಲಯ್ಯ ವಸ್ತ್ರದ, ಶಿವಮೂರ್ತಿ, ಮಹೇಶ ಕೊಟ್ಟೂರುಮಠ, ಬಸವರಾಜ ಪೂಜಾರಿ ಇತರರಿದ್ದರು.