ವಿವಿಧೆಡೆ ಮಹನೀಯರ ಜಯಂತಿ ಆಚರಣೆ

2gkn2-a2- hiregutti
Published on

ಗೋಕರ್ಣ: ಇಲ್ಲಿನ ಭದ್ರಕಾಳಿ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ನಿಮಿತ್ತ ಭಾವಚಿತ್ರಗಳಿಗೆ ದೀಪ ಬೆಳಗಿ ಪುಷ್ಪಾಂಜಲಿ ಸಮರ್ಪಿಸಲಾಯಿತು.


ಮುಖ್ಯೋಪಾಧ್ಯಾಯ ಸಿ.ಜಿ. ನಾಯಕ್​ದೊರೆ ಮತ್ತು ಶಿಕ್ಷಕ ದತ್ತಾತ್ರೇಯ ಹೆಗಡೆ ಮಾತನಾಡಿದರು.


ಹಿರಿಯ ಶಿಕ್ಷಕ ಆರ್.ಜಿ. ನಾವಡ, ವಿವೇಕ ಪಟಗಾರ, ಅಶ್ವಿನಿ ಚಿತ್ತಾಲ, ಸಂತೋಷ ನಾಯಕ ಮುಂತಾದವರು ನಿರ್ವಹಿಸಿದರು. ಇದಕ್ಕೂ ಮುನ್ನ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಶ್ರಮದಾನದ ಮೂಲಕ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಹಿರೇಗುತ್ತಿಯಲ್ಲಿ: ಹಿರೇಗುತ್ತಿ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಸ್ವಚ್ಛತಾ ಸಮಾರೋಪದಲ್ಲಿ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿದರು.
ಮುಖ್ಯೋಪಾಧ್ಯಾಯ ರೋಹಿದಾಸ ಗಾಂವಕರ ಮಾತನಾಡಿದರು. ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್,ನಾಗರಾಜ ನಾಯಕ, ಬಾಲಚಂದ್ರ ನಾಯಕ, ಜಾನಕಿ ಗೊಂಡ, ಇಂದಿರಾ ನಾಯಕ ಮುಂತಾದವರಿದ್ದರು. ಶಿಕ್ಷಕರಾದ ಎನ್. ರಾಮು ಮತ್ತು ಮಹಾದೇವ ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net