ಸಾಧಕರ ಸೇವೆ ಸ್ಮರಿಸುವುದು ಜವಾಬ್ದಾರಿ

22M.D.R.1
Published on

ಮದ್ದೂರು: ಸಾಧಕರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್ ಹೇಳಿದರು.ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಹಕಾರಿ ಧುರೀಣ ಕೋಣಸಾಲೆ ಪಟೇಲ್ ಕೆ.ತಮ್ಮಣ್ಣಗೌಡರ ಜಯಂತಿಯಲ್ಲಿ ಅವರು ಮಾತನಾಡಿದರು.
ಸಹಕಾರಿ ರಂಗದಲ್ಲಿ ಹಿರಿಯರು ಶ್ರಮಿಸಿದ ಫಲವಾಗಿ ನಾವಿಂದು ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಸಂಘಗಳು ಸ್ವಾವಲಂಬಿಯಾಗಿವೆ ಎಂದರು.
ವಿದ್ಯಾರ್ಥಿಗಳು ಹಿರಿಯರ ತ್ಯಾಗ ಮತ್ತು ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕು. ಉತ್ತಮ ನಾಗರಿಕರಾಗಬೇಕು ಎಂದರು.
ಗುಮಾಸ್ತರಾಗಿದ್ದ ತಮ್ಮಣ್ಣಗೌಡ ತಾವು ತಮ್ಮ ಕುಟುಂಬದ ಏಳಿಗೆಗೆ ಮಾತ್ರ ಚಿಂತಿಸದೆ ಸಮಾಜದ, ರೈತರ ಮಕ್ಕಳ ಏಳಿಗಾಗಿ ದುಡಿದರು. ಅದರ ಫಲವಾಗಿ ತಾಲೂಕಿನಾದ್ಯಂತ ಹಲವು ಸಹಕಾರ ಸಂಘಗಳು ಹುಟ್ಟು ಪಡೆದು ಬೆಳವಣಿಗೆ ಹೊಂದಿದವು ಎಂದರು. ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್ ಶಿವಕುಮಾರ್, ಉಪ ಪ್ರಾಂಶುಪಾಲರಾದ ಪ್ರಕಾಶ್, ನಂದಿನಿ, ಮುಖ್ಯ ಶಿಕ್ಷಕರಾದ ಎಂ.ಟಿ.ಚಂದ್ರಶೇಖರ್, ಕೆ. ಎನ್.ವರದರಾಜು, ಅಶ್ವಿನಿ, ಉಪನ್ಯಾಸಕರಾದ ಎಚ್.ಎಸ್ ಪಂಚಲಿಂಗೇಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net