ಮರ್ಲೆ ಗ್ರಾಪಂ ಅಧ್ಯಕ್ಷರಾಗಿ ಜಯಂತಿ ರಾಜೇಗೌಡ ಆಯ್ಕೆ

23 ckm 4
ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತಿ ರಾಜೇಗೌಡ ಅವರನ್ನು ಸಹಸದಸ್ಯರು ಅಭಿನಂದಿಸಿದರು. ದೀಪಕ್ ದೊಡ್ಡಯ್ಯ, ನೆಟ್ಟೆಕೆರೆಹಳ್ಳಿ ಜಯಣ್ಣ, ಯೋಗೀಶ್, ಲೀಲಾವತಿ ನಾಗರಾಜ್, ಸುಧಾ ಮಂಜುನಾಥ್, ಎಂ.ಎಸ್.ಚAದ್ರಪ್ಪ, ಭಾಗ್ಯ ಮಲ್ಲೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಂತಿ ರಾಜೇಗೌಡ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ರಾಜೇಗೌಡ ಹೊರತುಪಡಿಸಿ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಿವಕುಮಾರ್ ಅವರು ಜಯಂತಿ ರಾಜೇ ಗೌಡರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ, ಪ್ರಜಾಪ್ರಭುತ್ವ ದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೂಲ ಬೇರುಗಳಿದ್ದಂತೆ. ಇಂಥ ಹುದ್ದೆಯನ್ನು ಅಲಂಕರಿಸಿರುವವರು ಅಂಬೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಳೆದ ಅನೇಕ ವರ್ಷಗಳಿಂದ ಅಧ್ಯಕ್ಷ ಸ್ಥಾನ ಎಂಬುದು ಉಳ್ಳವರು ಕೈಯಲ್ಲಿತ್ತು. ತದನಂತರ ಪ್ರಜಾ ಪ್ರಭುತ್ವ ಸಂವಿಧಾನದ ಮೂಲಕ ತಿದ್ದುಪಡಿ ತಂದು ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸುವ ಮೂಲಕ ಮೀಸಲಾತಿ ಬದಲಾವಣೆಗೊಳಿಸಿದ ಕಾರಣ ರಾಜಕೀಯ ಹಿನ್ನೆಲೆ ಇಲ್ಲದವರು ಕೂಡಾ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಎಸ್.ಸಿ. ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಗ್ರಾಪಂ ಅಧ್ಯಕ್ಷರು ಗ್ರಾಮದ ಪ್ರಥಮ ಪ್ರಜೆಯಂತೆ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹರಿಸುವುದು ಕರ್ತವ್ಯವಾಗಬೇಕು. ಆಗ ಮಾತ್ರ ಜನಮಾನಸದಲ್ಲಿ ಅಧಿಕಾರ ತ್ಯಜಿಸಿದರೂ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಜಯಂತಿ ರಾಜೇಗೌಡ ಮಾತನಾಡಿ, ಸದಸ್ಯರ ಸಹಕಾರ ಮತ್ತು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲೂ ತೊಡಕಾಗದಂತೆ ಸರ್ಕಾರದ ಸೌಲಭ್ಯಗಳನ್ನು ಜಾತಿ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆಗೆ ಮುಂದಾಗುವ ಮೂಲಕ ಮರ್ಲೆ ಪಂಚಾಯಿತಿ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ಅಂಬಳೆ ಹೋಬಳಿ ಬಿಜೆಪಿ ಅಧ್ಯಕ್ಷ ಯೋಗೀಶ್, ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ನಾಗರಾಜ್, ಸದಸ್ಯರಾದ ಸುಧಾ ಮಂಜುನಾಥ್, ಎಂ.ಎಸ್.ಚAದ್ರಪ್ಪ, ಭಾಗ್ಯ ಮಲ್ಲೇಶ್, ಎಂ.ಇ.ಸುರೇಶ್, ಹೂವಮ್ಮ ಮೊಗಣ್ಣ, ರೂಪ ಎಸ್.ಚಿಕ್ಕಣ್ಣ, ಜಿ.ಸಿ.ಬಸವರಾಜು, ಎಂ.ಇ.ರಾಜು, ಎಂ.ಎನ್.ರಮೇಶ್, ವೆಂಕಟಮ್ಮ ಪಾಪಣ್ಣ, ಟಿ.ಎಸ್.ಜಗದೀಶ್, ಗೌರಮ್ಮ ಕೃಷ್ಣ, ಕೆ.ಪಿ.ಶ್ರೀಧರ್, ಮುಖಂಡ ಮಣೇನಹಳ್ಳಿ ರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net