

ಮಂಗಳೂರು: ಜಯಲಕ್ಷ್ಮಿ ಸಿಲ್ಕ್ಸ್ ಬಿಜೈ ಮಂಗಳೂರು ವತಿಯಿಂದ ಕೆಎಂಸಿ ಆಸ್ಪತ್ರೆ, ರೆಡ್ ಕ್ರಾಸ್ ಸೊಸೈಟಿ ಹಾಗೂ ಅರ್ಬನ್ ಹೆಲ್ತ್ ಸೆಂಟರ್ ಮಂಗಳೂರು ಸಹಯೋಗದಲ್ಲಿ ನಗರದ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಶನಿವಾರ ರಕ್ತದಾನ ಶಿಬಿರ ಜರುಗಿತು.
ಕೆಎಂಸಿ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ರೋಹಿತ್ ಉದ್ಘಾಟಿಸದರು. ರೆಡ್ ಕ್ರಾಸ್ ಸೊಸೈಟಿಯ ಗೌರವ ಸಲಹೆಗಾರ ಪ್ರಭಾಕರ ಶರ್ಮ, ರಕ್ತದಾನ ಶಿಬಿರಗಳ ಸಂಯೋಜಕ ಪ್ರವೀಣ್ ಮತ್ತು, ಸ್ಥಳೀಯ ನಗರ ಆರೋಗ್ಯ ಕೇಂದ್ರದ ಡಾ.ಜಯಶ್ರೀ, ಜಯಲಕ್ಷ್ಮಿ ಸಿಲ್ಕ್ಸ್ ಬ್ರಾಂಚ್ ಹೆಡ್ ರಾಜೇಂದ್ರ ಉಳ್ಳಾಲ್ ಉಪಸ್ಥಿತರಿದ್ದರು.
ಜಯಲಕ್ಷ್ಮಿ ಸಿಲ್ಕ್ಸ್ ಸಿಬ್ಬಂದಿ, ದಾನಿಗಳು ಉಪಸ್ಥಿತರಿದ್ದರು.
.