ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಜಯಕುಮಾರ್. ಆರ್ ನೇಮಕ

mng_27 nov jayakumar (1)
ಜಯಕುಮಾರ್. ಆರ್
Published on

ಮಂಗಳೂರು: ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಜಯಕುಮಾರ್ ಆರ್ ಅವರು ನ.26 ರಂದು ಅಧಿಕಾರ ಸ್ವೀಕರಿಸಿರುತ್ತಾರೆ. ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡ ಇವರು ರಾಜ್ಯದ ವಿವಿದೆಡೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ) ನ ತಾಂತ್ರಿಕ ನಿರ್ದೇಶಕರಾಗಿ, ಕವಿಪ್ರನಿನಿಯಲ್ಲಿ ನಿರ್ದೇಶಕರು (ಪ್ರಸರಣ) ಆಗಿ ಸೇವೆ ಸಲ್ಲಿಸಿದ ಇವರು ಪದೋನ್ನತಿಯೊಂದಿಗೆ ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net