

ಮಂಡ್ಯ: ನಗರದ ಬೃಹದಾಕಾರದ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಅರಣ್ಯಾಧಿಕಾರಿ ದಿವ್ಯಾ ಅವರಿಗೆ ಮನವಿ ಸಲ್ಲಿಸಿದರು.
ಅಶೋಕನಗರ ಮೂರನೇ ಅಡ್ಡರಸ್ತೆ ಬಾಲ ಭವನ ಪಾರ್ಕ್ ಹತ್ತಿರ 50 ರಿಂದ 60 ವರ್ಷದ ಮರ ಕಟಾವು ಮಾಡಲು ಅವಕಾಶ ಕೊಟ್ಟಿರುವುದು ಸರಿಯಾದ ಕ್ರಮವಲ್ಲ. ಆ ಸ್ಥಳವನ್ನು ಪರಿಶೀಲನೆ ಮಾಡಿ ನಂತರ ನೀವು ಒಪ್ಪಿಗೆ ಕೊಡಬೇಕೋ ಅಥವಾ ಬೇಡವೋ ಎಂಬುದನ್ನು ತಿಳಿಯದೆ ಯಾವ ಆಧಾರದ ಮೇಲೆ ಮರ ಕಟಾವು ಮಾಡುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಬೀದಿಗಳಲ್ಲಿ ಆಕರ್ಷಣೀಯವಾಗಿ ಕಾಣುವ ಮರಗಳನ್ನು ಈಗಾಗಲೇ ಮುಕ್ಕಾಲು ಭಾಗದಷ್ಟು ಮರದ ರಂಭೆಗಳ ಸಮೇತ ಕಟಾವು ಮಾಡಲಾಗಿದೆ. ಇದರಿಂದ ನಗರ ಸೌಂದರ್ಯ ಮತ್ತು ಮರಗಳು ಕಡಿಮೆ ಆಗುವುದಲ್ಲದೆ ಇದರ ತೀವ್ರತೆಯನ್ನು ನಿವಾಸಿಗಳು ಎದುರಿಸಬೇಕಾ?. ಸಸಿ ನೆಟ್ಟು ಅವುಗಳನ್ನು ಪೋಷಣೆ ಮಾಡಲು ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ. ಅದನ್ನು ಮರೆತು ಬೆಳೆದು ನಿಂತಿರುವ ಮರ ಕಟಾವಿಗೆ ಅವಕಾಶ ಮಾಡಿಕೊಡುವುದು ಯಾವ ನ್ಯಾಯ, ಇಲ್ಲಿಗೆ ಇದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಯೋಗಣ್ಣ, ಎನ್.ಚಂದ್ರಶೇಖರ್, ಬೋರೇಗೌಡ, ಆರ್.ಹರೀಶ್ ಇದ್ದರು.