

ವಿಜಯವಾಣಿ ಸುದ್ದಿಜಾಲ ಉಡುಪಿ
ರಂಗಭೂಮಿಗೆ ಸಮಾಜದ ಘಟನಾವಳಿಗಳೇ ಕಥಾ ಹಂದರವಾಗಿದೆ. ಪೌರಾಣಿಕ, ಸಾಮಾಜಿಕ ಹಾಗೂ ಐತಿಹಾಸಿಕ ವಿದ್ಯಮಾನಗಳನ್ನು ಜನರಿಗೆ ತಲುಪಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನೂ ತಿಳಿಸುವುದರ ಜತೆಗೆ ಜೀವನ ಹೇಗೆ ಮಾಡಬೇಕು, ಬದುಕು ಹೇಗಿರಬೇಕು ಎಂಬ ಸಂದೇಶವನ್ನೂ ಸಹ ನಮಗೆ ನೀಡುತ್ತದೆ ಎಂದು ಸಾಂಸ್ಕೃತಿಕ ಚಿಂತಕ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದರು.
ಉಡುಪಿ ಜಿಲ್ಲಾ ಕಸಾಪ ಹೊರ ತಂದ 2021-24ರ ಅವಧಿಯ ಸಮ್ಮೇಳನಾಧ್ಯಕ್ಷರ ಭಾಷಣದ ಕೃತಿಯನ್ನು ಡಾ. ಉಮೇಶ್ ಪುತ್ರನ್ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅವರು ಖ್ಯಾತ ರಂಗಕರ್ಮಿ ಜೀವನರಾಮ್ ಸುಳ್ಯ ಅವರನ್ನು ಪರಿಷತ್ ಪರವಾಗಿ ಸನ್ಮಾನಿಸಿದರು.
ಸಾಂಸ್ಕೃತಿಕ ಚಿಂತಕ ಮೋಹನ್ ಆಳ್ವ ಶುಭ ಹಾರೈಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ಭಾಷಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಮಾಧ್ಯಮ ಪ್ರತಿನಿಧಿ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಾಡೋಜ ಹಂಪನಾ ರಚನೆಯ, ಡಾ.ನಾ. ದಾಮೋದರ ಶೆಟ್ಟಿ ರಂಗ ರೂಪಕ, ಡಾ. ಜೀವನ ರಾಂ ಸುಳ್ಯ ಅವರ ವಿನ್ಯಾಸ, ನಿರ್ದೇಶನದಲ್ಲಿ ಪ್ರದರ್ಶನಗೊಂಡ ಚಾರುವಸಂತ ನಾಟಕ ರಂಗಾಸ್ತಕರ ಮೆಚ್ಚುಗೆಗೆ ಪಾತ್ರವಾಯಿತು.