ಚಪ್ಪರ ಮುಹೂರ್ತ, ಶ್ರಮದಾನ

New Project
Published on

ಕಡಬ: ನೂತನವಾಗಿ ನಿರ್ಮಾಣಗೊಂಡಿರುವ ಕಡಬದ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕುಂಭಾಭಿಷೇಕ ಶೃಂಗೇರಿ ಜಗದ್ಗುರುಗಳಿಂದ ಏ.16 ರಿಂದ 21ರ ತನಕ ನಡೆಯಲಿದ್ದು, ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮುಹೂರ್ತ ಹಾಗೂ ಭಕ್ತರಿಂದ ಸಾಮೂಹಿಕ ಶ್ರಮದಾನ ನಡೆಯಿತು.

ಕಡಬದ ಹಿರಿಯ ಉದ್ಯಮಿ ಗೋಪಾಲಕೃಷ್ಣ ರಾವ್ ಮಡಿಯಾಲ ಚಪ್ಪರ ಮುಹೂರ್ತ ನೆರವೇರಿಸಿದರು. ಚಪ್ಪರ ವಿನ್ಯಾಸಕಾರ ಮೋನಪ್ಪ ಗೌಡ ನಾಡೋಳಿ ಹಾಗೂ ಕೊರಗಪ್ಪ ಗೌಡ ಆದ್ರ ದೀಪ ಬೆಳಗಿಸಿದರು. ಪ್ರತಿಷ್ಠಾಪನಾ ಬ್ರಹ್ಮಕುಂಭಾಭಿಷೇಕ ಸಮಿತಿಯ ಗೌರವಾಧ್ಯಕ್ಷ ಎಂ.ಸುರೇಶ್ ರಾವ್, ಅಧ್ಯಕ್ಷ ಅರುಣ್‌ಕುಮಾರ್ ಜೆಡೆಮನೆ, ಕಾರ್ಯದರ್ಶಿ ಸೋಮಪ್ಪ ನಾಕ್ ಕಡಬ, ಶ್ರೀ ಶೃಂಗೇರಿ ಜಗದ್ಗುರು ಅಭಿವಂದನ ಸಮಿತಿಯ ಗೌರವಾಧ್ಯಕ್ಷ ರೆಂಜಿಲಾಡಿ ಬೀಡು ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಉಪಾಧ್ಯಕ್ಷೆ ಪುಲಸ್ತ್ಯಾ ರೈ, ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ನಾಕ್ ಮೇಲಿನಮನೆ, ಶ್ರೀ ಜಯದುರ್ಗಾ ಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ವಿದ್ಯಾನಗರ, ಉಪಾಧ್ಯಕ್ಷೆ ಗಾಯತ್ರಿ ಎಸ್.ಆರ್., ಕಾರ್ಯದರ್ಶಿ ಮಮತಾ ಕೆ., ಕೋಶಾಧಿಕಾರಿ ಮಮತಾ ಕಡಬ, ಪ್ರಮುಖರಾದ ವಾಣಿ ಅರುಣ್ ಜೆಡೆಮನೆ, ಸಾತ್ವಿಕ್ ಜೆಡೆಮನೆ, ಗಣೇಶ್ ಭಟ್ ಪಾದೆ, ಸುರೇಂದ್ರ ನಾಕ್ ಕುಕ್ಕೆರೆಬೆಟ್ಟು, ಮೋಹನ ಕೆರೆಕ್ಕೋಡಿ, ಶಿವಪ್ರಸಾದ್ ರೈ ಮೈಲೇರಿ, ಪ್ರಮೋದ್ ರೈ ನಂದುಗುರಿ, ರಾಜೇಶ್ ಕಂಡೂರು, ಯಶೋಧರ ಪೂವಳ, ರಘುರಾಮ ನಾಕ್ ಕುಕ್ಕೆರೆಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

v

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net