ಕಾವೇರಿ ನೀರು ಹಂಚಿಕೆ ಅನ್ಯಾಯಕ್ಕೆ ಖಂಡನೆ

29 ylp 02 (manavi)
Published on

ಯಲ್ಲಾಪುರ: ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ತಹಸೀಲ್ದಾರ್ ಎಂ.ಗುರುರಾಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಿ, ರಾಜ್ಯದ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಸಂಘಟನೆಯ ಪ್ರಮುಖರು ಒತ್ತಾಯಿಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್, ನಗರ ಘಟಕದ ಅಧ್ಯಕ್ಷ ಕೆ.ಎಫ್. ಕಂಬಳೆನ್ನವರ್, ಉಪಾಧ್ಯಕ್ಷ ಸಮೀರ್ ಖುರೇಷಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಹನುಮರೆಡ್ಡಿ, ಪ್ರಮುಖರಾದ ಮಹೇಶ ನಾಯ್ಕ, ಫಾತಿಮಾ ದರವೇಶ, ಶಾಹೀನ್ ಮುಜಾವರ, ಶಂಶಾದ್ ಅತ್ತಾರ್, ಸಂತೋಷ ಗಾವಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net