

ವಿಜಯಪುರ: ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಅಕ್ರಮವಾಗಿ ಆಟೋಗಳಿಗೆ ತುಂಬಿಸುವ ದಂಧೆಗೆ ಕಡಿವಾಣ ಹಾಕಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಿದ್ದನಗೌಡ ದಾಶ್ಯಾಳ ಮಾತನಾಡಿ, ನಗರದ ಅಡುಗೆ ಅನಿಲದ ಅಕ್ರಮ ದಂಧೆ ಅವ್ಯಾಹತವಾಗಿ ನಡೆದಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯಾಪಕವಾಗಿ ದಾಳಿ ನಡೆಸಿ ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದರು.
ಮುಖಂಡರಾದ ಪಿಂಟು ಗೊಬ್ಬೂರ, ಮುಕದಸ್ ಇನಾಮದಾರ, ಸಿದ್ರಾಮ ಹೋಳಿ, ಆನಂದ ಹುನ್ನೂರ, ಶಿವರಾಜಗೌಡ ಪಾಟೀಲ, ಅಶೋಕ ಕೊಡಗ, ವಿರೇಶ ಪಾಟೀಲ, ಉಮೇಶ ಚಲವಾದಿ, ಸಂಗಮೇಶ ಗಾಣಿಗೇರ, ಮಲ್ಲು ಜಮಖಂಡಿ, ಚಿದಾನಂದ ಮಠಪತಿ, ಜಸಪೀತ್ ಸಿಂಗ್ ಗ್ಯಾನಿ, ಮೀಣಾ ಪತ್ತಾರ, ಲಕ್ಷ್ಮಿ ದಾಶ್ಯಾಳ, ಮಲ್ಲಮ್ಮ ಲಮಾಣಿ, ಕವಿತಾ ಖಿಲಾರಿ, ಮಂಜುಳಾ ಮುತ್ತಗಿಕರ, ಸುಜಾತಾ ಪೂಜಾರಿ, ಅನ್ನಪೂರ್ಣ ಕೋಳಿ, ಗಾಯತ್ರಿ ರೇಡೇಕರ, ಗಾಯತ್ರಿ ಬೆನಕನಹಳ್ಳಿ, ರಾಜಶ್ರೀ ವಾಲಿಕಾರ ಮತ್ತಿತರರಿದ್ದರು.