

ವಿಜಯಪುರ: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ದಾಶ್ಯಾಳ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಸಾರ್ವಭೌಮ ಹೌದೋ ಅಲ್ಲವೋ ಎಂಬುದೇ ಕನ್ನಡಿಗರಿಗೆ ತಿಳಿಯದಂತಾಗಿದೆ, ಹೊರ ರಾಜ್ಯದಿಂದ ಬಂದು ಕನ್ನಡದ ನೆಲ, ಜಲ, ಮೂಲ ಸೌಕರ್ಯ ಪಡೆದು ಕನ್ನಡಿಗರಿಗೆ ಉದ್ಯೋಗ ನೀಡುವುದಿಲ್ಲವೆಂದರೆ ಯಾವ ನ್ಯಾಯ? ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡು ಮೀಸಲಾತಿ ವಿಧೇಯಕ ಜಾರಿಗೊಳಿಸಿ ನಂತರ ಈ ಆದೇಶವವನ್ನು ತಡೆ ಹಿಡಿಯಲಾಯಿತು. ಹೀಗಾದರೆ ಕನ್ನಡಿಗ ಹೇಗೆ ಸಾರ್ವಭೌಮನಾಗುತ್ತಾನೆ. ಪ್ರತಿಯೊಂದು ಖಾಸಗಿ ಕಾರ್ಖಾನೆ ಹಾಗೂ ದೊಡ್ಡ ದೊಡ್ಡ ಅಂಗಡಿ ಮುಂಗಟ್ಟುಗಳನ್ನು ಹೊರ ರಾಜ್ಯದಿಂದ ಬಂದು ನೆಲೆ ಊರಿ ನಮ್ಮ ಕನ್ನಡರಿಗೆ ಕೆಲಸಗಳನ್ನು ಕೊಡದೇ ತಮ್ಮ ರಾಜ್ಯದವರನ್ನು ತೆಗೆದುಕೊಂಡು ಬಂದು ಕನ್ನಡರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ. ಆದರಿಂದ ಕನ್ನಡರಿಗೆ ಶೇ. 70ರಷ್ಟು ಉದ್ಯೋಗ ಮೀಸಲಾತಿಯನ್ನು ಸರ್ಕಾರದ ನೀತಿ ನಿಯಮದ ಅಡಿಯಲ್ಲಿ ಕಲ್ಪಿಸಬೇಕೆಂದರು.
ಮುಖಂಡರಾದ ಬಿ.ಬಿ. ಇಂಗಳಗಿ, ಮುಕದಸ್ ಇನಾಮದಾರ, ರಿಯಾಜ ಪಾಂಡು, ಮಹೇಶ ನಾಯಕ, ಮೀನಾ ಕುಂದನಗಾರ, ಸುಜಾತಾ ಪೂಜಾರಿ, ಮಲ್ಲಮ್ಮ ಲಮಾಣಿ, ಬೇಬಿ ತಳವಾರ, ರೇಣುಕಾ ಅಗಸರ, ಗಾಯತ್ರಿ ವನಕನಳ್ಳಿ, ಕವಿತಾ ಖಿಲಾರಿ, ಇಸ್ಮಾಯಿಲ ಕುಣಬಿ, ನಿಂಗರಾಜ ಗೊರಗುಂಡಗಿ, ಬಾಪುಗೌಡ ಪಾಟೀಲ, ಸಿದ್ರಾಮ ಅವಟಿ, ಸಂತೋಷ ಮನಗೂಳಿ, ಖಾಜಾಸಾಬ ಪಾಂಡು, ಬಸವರಾಜ ಸಿಂಗನಳ್ಳಿ, ಪರಶುರಾಮ ಬಂಡಿವಡ್ಡರ, ಶಿವಯ್ಯ ಬರಗಿ, ಮಹಾಂತೇಶ ಇಂಗಳೇಶ್ವರ, ರಾಜು ಮೂಲಿಮನಿ, ನಾಗಣ್ಣ ಪಡೇಕನೂರ, ಸೋಮಲಿಂಗ ನಾಯ್ಕೋಡಿ, ಅರ್ಜುನ ಧರಿ, ರುದ್ರೇಶ ಮುರಾಳ, ಆನಂದ ಹೊನ್ನೂರ ಮತ್ತಿತರರಿದ್ದರು.