ಗಮನ ಸೆಳೆದ ಜಾವಾ, ಯೆಜ್ಡಿ ಬೈಕ್‌ಗಳ ದಿಬ್ಬಣ

mysore
Published on

ಮೈಸೂರು: ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಾವಾ ಮತ್ತು ಯೆಜ್ಡಿ ಬೈಕ್‌ಗಳ ರ‌್ಯಾಲಿ ಗಮನ ಸೆಳೆಯಿತು.


22ನೇ ಅಂತಾರಾಷ್ಟ್ರೀಯ ಜಾವಾ ದಿನದ ಅಂಗವಾಗಿ ಮೈಸೂರು ಜಾವಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರ‌್ಯಾಲಿಯಲ್ಲಿ 3, 4 ತಲೆಮಾರಿನವರು ಜಾವಾ ಬೈಕ್ ಮೇಲಿನ ಪ್ರೀತಿಯಿಂದ ಭಾಗಿಯಾಗಿದ್ದು ವಿಶೇಷ.


ಆರ್‌ಟಿಒ ಕಚೇರಿ ಮುಂಭಾಗದಿಂದ ಆರಂಭವಾದ ರ‌್ಯಾಲಿ ಸಾತಗಳ್ಳಿ ರಸ್ತೆ ಜಂಕ್ಷನ್, ಬನ್ನೂರು ರಸ್ತೆ ಜಂಕ್ಷನ್, ತಿ.ನರಸೀಪುರ ರಸ್ತೆ, ನಂಜನಗೂಡು ರಸ್ತೆ, ಎಚ್.ಡಿ. ಕೋಟೆ ರಸ್ತೆ, ಬೋಗಾದಿ ರಸ್ತೆ, ಹುಣಸೂರು ರಸ್ತೆ, ಕೆಆರ್‌ಎಸ್ ರಸ್ತೆ ಜಂಕ್ಷನ್ ಮೂಲಕ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಮೂಲಕ ಶ್ರೀರಂಗಪಟ್ಟಣದ ಸರ್ಕಾರಿ ಅತಿಥಿ ಗೃಹದವರೆಗೂ ನಡೆಯಿತು.

1957 ರಿಂದ 1996ರವರೆಗೆ ತಯಾರಾದ ವಿವಿಧ ಮಾಡೆಲ್‌ಗಳ ಜಾವಾ ಹಾಗೂ ಯೆಜ್ಡಿ ಬೈಕ್‌ಗಳು ರ‌್ಯಾಲಿಯಲ್ಲಿ ಸಾಗಿದವು. 40 ಸಿಸಿಯಿಂದ 400 ಸಿಸಿವರೆಗೆ ಜಾವಾ, ಯೆಜ್ಡಿ, ರೋಡ್ ಕಿಂಗ್ ಸೇರಿದಂತೆ ಇನ್ನಿತರ ಮಾಡೆಲ್‌ಗಳ ಬೈಕ್‌ಗಳನ್ನು ಸಾರ್ವಜನಿಕರು ವೀಕ್ಷಿಸಿದರು.

ಮೈಸೂರು, ಬೆಂಗಳೂರು, ತುಮಕೂರು, ಮಂಡ್ಯ, ಕೊಡುಗೆ ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಜಾವಾ ಮತ್ತು ಯೆಜ್ಡಿ ಬೈಕ್‌ಗಳೊಂದಿಗೆ ಸವಾರರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net