

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ನೇತೃತ್ವದಲ್ಲಿ 8ನೇ ವರ್ಷದ ದೀಪಾವಳಿ ಸಂಭ್ರಮ ಭಾನುವಾರ ಸಂಜೆ ಸಂಘಟನೆ ಪ್ರಮುಖರಾದ ಗಾಂಧಿನಗರದಲ್ಲಿರುವ ದಿನೇಶ್ ನಾಯ್ಕ ಅವರ ಮನೆಯಲ್ಲಿ ಆಯೋಜಿಸಲಾಯಿತು.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಯೋಧರನ್ನು ಗೌರವಿಸುವ ಉದ್ದೇಶದಿಂದ ಜವನೆರ್ ಬೆದ್ರ ಫೌಂಡೇಶನ್ ಆರಂಭಿಸಿದ ‘ಯೋಧ ನಮನ’ ಕಾರ್ಯಕ್ರಮ ನಡೆಯಿತು. ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳಾದ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ್ ಸಮಯದಲ್ಲಿ ದೇಶ ಸೇವೆ ಸಲ್ಲಿಸಿದ್ದ ಯೋಧ ತಿಲಕ್ ಎಸ್.ಪಿ. ಅವರನ್ನು ಸನ್ಮಾನಿಸಲಾಯಿತು.
ಯೋಧ ನಮನದ ಜತೆಗೆ, ಕುಟುಂಬ ಸಮ್ಮಿಲನ ಮತ್ತು ಗೋ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಸಂಘಟನೆ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಗುರುಪ್ರಸಾದ್ ಹೊಳ್ಳ, ರಾಜೇಂದ್ರ ಜಿ., ಅಶ್ವಿತಾ, ಪುರಸಭಾ ಸದಸ್ಯರಾದ ಮಮತಾ ರಾವ್, ದಿನೇಶ್ ನಾಯಕ್, ನಾರಾಯಣ ಪಡುಮಲೆ, ರಂಜಿತ್ ಶೆಟ್ಟಿ, ಸಹನಾ ನಾಯಕ್ ಮತ್ತಿತರರಿದ್ದರು. ಸಂದೀಪ್ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.