ಜವಳಗೇರಾ ಹೋಬಳಿ ವ್ಯಾಪ್ತಿಯಲ್ಲಿ ಮದ್ಯ ಅಕ್ರಮಕ್ಕೆ ಕಡಿವಾಣ ಹಾಕಿ; ರಾಜ್ಯ ರೈತ ಸಂಘ ಮುಖಂಡರ ಆಗ್ರಹ

Sindhanuru Farmers Association Appeal
ಅಕ್ರಮ ಮದ್ಯ ಮಾರಾಟ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಂಧನೂರಲ್ಲಿ ಅಬಕಾರಿ ನಿರೀಕ್ಷಕರಿಗೆ ರಾಜ್ಯ ರೈತ ಸಂಘ ಮನವಿ ಸಲ್ಲಿಸಿತು.
Published on

ಸಿಂಧನೂರು: ಮದ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಬಕಾರಿ ನಿರೀಕ್ಷಕರಿಗೆ ರಾಜ್ಯ ರೈತ ಸಂಘ ಬುಧವಾರ ಮನವಿ ಸಲ್ಲಿಸಿತು.

ಜವಳಗೇರಾ ಹೋಬಳಿ ವ್ಯಾಪ್ತಿಯ ಸುಲ್ತಾನಪುರ, ಜಂಗಮರಹಟ್ಟಿ ಹಾಗೂ ಶ್ರೀನಿವಾಸಕ್ಯಾಂಪ್ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವವರ ಹೆರಸುಗಳನ್ನು ಮಾರ್ಚ್‌ನಲ್ಲಿ ಅಬಕಾರಿ ಇಲಾಖೆಗೆ ನೀಡಿದ್ದು, ಕೆಲವರ ವಿರುದ್ಧ ಕ್ರಮಕೈಗೊಂಡಿದ್ದು, ಇನ್ನೂ ಐವರು ಲಾಕ್‌ಡೌನ್ ಸಂದರ್ಭದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ಇವರ ವಿರುದ್ಧ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. 24 ಗಂಟೆಯೂ ನಿರಂತರ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಕೂಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಮಹಿಳೆಯರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಜು.13 ರಂದು ಅಬಕಾರಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮಳ್ಳಿ, ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ತಾಲೂಕು ಅಧ್ಯಕ್ಷ ಶಿವರಾಜ, ಸಲೀಂ ಪಟೇಲ್, ನಾಗರಾಜ ಸೋಮಲಾಪುರ, ರಾಘವೇಂದ್ರ ಹೆಡಗಿನಾಳ, ಹುಲುಗಯ್ಯ ತಿಮ್ಮಾಪುರ, ಅಂಬಮ್ಮ ಹರಿಜನ, ಕರಿಯಮ್ಮ ಗೌಡನಬಾವಿ, ಗಂಗಮ್ಮ ಹುಡೇವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net