ಮೈಸೂರು ದಸರಾದಲ್ಲಿ ಜಾವಾ ಬೈಕ್ ರೈಡ್, ಟಾಂಗಾ ಸವಾರಿ

tanga
Published on

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅ.4 ರಿಂದ 6ವರೆಗೆ ನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅ.4 ರಂದು ಪಾರಂಪರಿಕ ಜಾವಾ ಬೈಕ್ ಸವಾರಿ ಏರ್ಪಡಿಸಲಾಗಿದ್ದು, ಮೋಟಾರ್ ಬೈಕ್ ಸವಾರಿಗೆ 25 ರಿಂದ 50 ವರ್ಷ ವಯೋ ಮಿತಿಯುಳ್ಳವರು ಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಳ್ಳುವ 10 ಜಾವ ಮೋಟರ್ ಬೈಕುವುಳ್ಳ ಆಸಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು.

ಮೋಟಾರ್ ಬೈಕ್ ಸವಾರಿಯು ರಂಗಾಚಾರ್ಲು ಪುರಭವನ (ಟೌನ್‌ಹಾಲ್) ದಿಂದ ಪ್ರಾರಂಭವಾಗಿ, ದೊಡ್ಡ ಗಡಿಯಾರ, ಪ್ರೀ ಮೇಸನ್ಸ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಬನುಮಯ್ಯ ಶಿಕ್ಷಣ ಸಂಸ್ಥೆ, ನಗರ ಪಾಲಿಕೆ, ಮಹಾರಾಜ ಸಂಸ್ಕೃತ ಪಾಠಶಾಲೆ, ಸಾರ್ವಜನಿಕ ಕಚೇರಿಗಳ ಸಂಕೀರ್ಣ, ಅಂಬಾವಿಲಾಸ ಅರಮನೆ (ವರಹಗೇಟ್), ಗನ್‌ಹೌಸ್, ಜೆಎಸ್‌ಎಸ್ ಮಹಾವಿದ್ಯಾಪೀಠ ಕಟ್ಟಡ, ಕರ್ಜನ್ ಪಾರ್ಕ್, ಬ್ಯಾಂಡ್ ಹೌಸ್, ಆಡಳಿತ ತರಬೇತಿ ಸಂಸ್ಥೆ, ಕೆಎಸ್‌ಆರ್‌ಪಿ ಕಟ್ಟಡ, ಲಲಿತ್‌ಮಹಲ್ ಪ್ಯಾಲೆಸ್, ಪೋಸ್ಟಲ್ ಟ್ರೈನಿಂಗ್ ಸೆಂಟರ್, ವಸಂತ್ ಮಹಲ್ ಮೂಲಕ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಬಳಿ ಮುಕ್ತಾಯಗೊಳ್ಳಲಿದೆ.

ಟಾಂಗಾ ಸವಾರಿ: ಅ.5 ರಂದು ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು 25 ರಿಂದ 55 ವರ್ಷ ವಯೋಮಿತಿಯುಳ್ಳ ದಂಪತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 50 ಜೋಡಿಗಳಿಗೆ ಮಾತ್ರ ಆದ್ಯತೆ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಟಾಂಗಾ ಸವಾರಿಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಫ್ರೀ ಮೇಸನ್ಸ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್, ಪದ್ಮಾಲಯ, ಹಳೇ ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ಹೋಟೆಲ್ ಮೆಟ್ರೊಪೋಲ್, ಮೈಸೂರು ರೈಲ್ವೆ ಜಂಕ್ಷನ್, ಕೆ.ಆರ್. ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಆಯುರ್ವೇದಿಕ್ ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಂ, ಗಾಂಧಿ ವೃತ್ತ ಮೂಲಕ ಹಾದು ಪುರಭವನದಲ್ಲಿ ಅಂತ್ಯಗೊಳ್ಳಲಿದೆ.

ಪಾರಂಪರಿಕ ನಡಿಗೆ: ಅ.6 ರಂದು ರಂದು ಪಾರಂಪರಿಕ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ 18 ರಿಂದ 50 ವರ್ಷ ವಯೋಮಿತಿಯುಳ್ಳವರುಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಳ್ಳುವ 200 ಜನ ಆಸಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು. ನಡಿಗೆಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ದೊಡ್ಡ ಗಡಿಯಾರ, ಫ್ರೀ ಮೇಸನ್ಸ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ಕೃಷ್ಣರಾಜ ಒಡೆಯರ್, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಕೆ.ಆರ್. ಆಸ್ಪತ್ರೆ, ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್, ಗಾಂಧಿ ವೃತ್ತ ಮೂಲಕ ಹಾದು ಪುರಭವನ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.

ಮೂರು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ನುರಿತ ಇತಿಹಾಸ ಹಾಗೂ ಪುರಾತತ್ವ ತಜ್ಞರುಗಳು ಮೈಸೂರಿನ ವಿವಿಧ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸೆ.30ರೊಳಗೆ ದೊಡ್ಡಕೆರೆ ಮೈದಾನದ ಕರ್ನಾಟಕದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರನ್ನು ನೇರವಾಗಿ ಸಂಪರ್ಕಿಸಿ ಅಥವಾ ಇ-ಮೇಲ್ ddheritagemysore@gmail.com ಮೂಲಕ ಹೆಸರು ನೋಂದಾಯಿಸಬಹುದು. ಮಾಹಿತಿಗೆ ದೂ: 08212424671 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net