ಮಹಿಳೆಯರ ಕೊಡುಗೆ ಅನನ್ಯ: ಭಾಗೀರಥಿ ಮುರುಳ್ಯ ಅಭಿಮತ

New Project (15)
Published on

ಸುಳ್ಯ: ಕುಟುಂಬದ ಪೋಷಣೆಯಿಂದ ಹಿಡಿದು ಯುದ್ಧ ಭೂಮಿಯ ತನಕ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಸಾರ್ವಜನಿಕ ಬದುಕಿನಲ್ಲಿ ಇನ್ನಷ್ಟು ಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ‘ರಜತ ಸಂಭ್ರಮ’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಯಶೋದಾ ರಾಮಚಂದ್ರ ಸಮಾರೋಪ ಭಾಷಣ ಮಾಡಿದರು.

ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ವಾಣಿಬೆಟ್ಟು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಮಧುಮತಿ ಬೊಳ್ಳೂರು, ಶ್ರೀರಾಮ ಭಜನಾ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಹರಿಶ್ಚಂದ್ರ, ಕಪಿಲ ಯುವಕ ಮಂಡಲ ಅಧ್ಯಕ್ಷ ಹರೀಶ್ ಜೆ.ಬಿ., ಬೆಳ್ಳಿ ಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಪ್ರಧಾನ ಕಾರ್ಯದರ್ಶಿ ಸುನೀತಾ ರಾಮಚಂದ್ರ, ಕಾರ್ಯದರ್ಶಿ ಶೈಲಜಾ ಪಿ.ಶೆಟ್ಟಿ, ಕೋಶಾಧಿಕಾರಿ ಸವಿತಾ ಲಕ್ಷ್ಮಣ ಆಚಾರ್ಯ, ಸ್ಮರಣ ಸಂಚಿಕೆ ಸಂಪಾದಕಿ ಸುಮತಿ ರುನಾಥ, ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ, ರಮಾನಂದ ರೈ ಜಟ್ಟಿಪಳ್ಳ, ಸಂತೋಷ್ ಕುಮಾರ್ ರೈ ಮತ್ತಿತರರಿದ್ದರು. ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಚಿತ್ರಲೇಖಾ ಮಡಪ್ಪಾಡಿ ಸ್ವಾಗತಿಸಿದರು. ಮಾನಸ ಮಹಿಳಾ ಮಂಡಲ ಗೌರವಾಧ್ಯಕ್ಷೆ ಚಂದ್ರಾಕ್ಷಿ ಕೆ.ರೈ ಪ್ರಸ್ತಾವಿಸಿದರು. ಕಾರ್ಯದರ್ಶಿ ಅನನ್ಯಾ ಅನಿಲ್, ಕುಲ್‌ದೀಪ್ ಪೆಲ್ತಡ್ಕ ನಿರೂಪಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳ ಸಾಧಕರಾದ ನಳಿನಾಕ್ಷಿ ಎಚ್., ಕೆ.ಆರ್.ಗೋಪಾಲಕೃಷ್ಣ, ಜಲಜಾಕ್ಷಿ ಕೆ.ಡಿ., ರಾಮಚಂದ್ರ ಪೆಲ್ತಡ್ಕ, ರುನಾಥ ಜಟ್ಟಿಪಳ್ಳ, ಎನ್.ಎ.ಅಬ್ದುಲ್ಲ ಜಟ್ಟಿಪಳ್ಳ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net