ಉಣಕಲ್ಲ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ

siddappajja new
Published on

ಹುಬ್ಬಳ್ಳಿ : ಇಲ್ಲಿನ ಉಣಕಲ್ಲನ ಶ್ರೀ ಸದ್ಗುರು ಸಿದ್ದಪ್ಪಜ್ಜನವರ 103ನೇ ಪುಣ್ಯತಿಥಿ ಹಾಗೂ ರಥೋತ್ಸವ ಅಂಗವಾಗಿ ಜ. 28 ರಿಂದ ಫೆ. 3ರವರೆಗೆ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.

ಉಣಕಲ್ಲನ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮೂಲಗದ್ದುಗೆಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾನಗರ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಫೆ. 3ರಂದು ಸಂಜೆ 5 ಗಂಟೆಗೆ ರಥೋತ್ಸವ ಹಾಗೂ 4ರಂದು ಕಡುಬಿನ ಕಾಳಗ ಆಯೋಜಿಸಲಾಗಿದೆ ಎಂದು ಹೇಳಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ಹಿರಿಯರು ಹಾಗೂ ಯುವ ಪ್ರತಿಭೆಗಳನ್ನು ಸನ್ಮಾನಿಸಲಾಗುವು ಎಂದು ತಿಳಿಸಿದರು

ಪಾಲಿಕೆ ಮತ್ತೊಬ್ಬ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಉಣಕಲ್ಲ ಸಿದ್ದಪ್ಪಜನ ಜಾತ್ರೆಯಲ್ಲಿ ಹೊರ ರಾಜ್ಯಗಳ ಭಕ್ತರು ಸಹ ಪಾಲ್ಗೊಳ್ಳುತ್ತಾರೆ ಎಂದರು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿಯ ಬಾಲೆಹೊಸೂರು ಶ್ರೀಗಳು, ಮುರುಘಾಮಠ, ಮಣಖವಾಡ, ದೇವರಕೊಂಡ, ನವಲಗುಂದದ ಸ್ವಾಮೀಜಿಗಳು, ರುದ್ರಾಕ್ಷಿಮಠ, ಸುಳ್ಳ, ಭೈರನಟ್ಟಿ, ಅಗಡಿ, ಮುಳ್ಳಳ್ಳಿ, ಕಾಶಿಮಠದ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಶ್ರೀಮಠದ ಚೇರ್ಮನ್ ಶಿವು ಪಾಟೀಲ, ಉಮೇಶಗೌಡ ಕೌಜಗೇರಿ, ಬಾಬು ಹೊಟಗಿ, ಹನುಮಂತಪ್ಪ ಮಾಡಳ್ಳಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net