ಸಂಭ್ರಮ ಸಡಗರದಿಂದ ಜರುಗಿದ ಬೀರಲಿಂಗೇಶ್ವರ ಜಾತ್ರೆ

10-RNR-04
Published on

ರಾಣೆಬೆನ್ನೂರ: ತಾಲೂಕಿನ ಬೇಲೂರು ಗ್ರಾಮದ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಇತ್ತೀಚೆಗೆ ಸಂಭ್ರಮ ಸಡಗರದಿಂದ ಜರುಗಿತು.
ಜಾತ್ರೆಯ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮೋಟೆಬೆನ್ನೂರ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ಕಲಾ ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿ ನೆರೆದವರ ಗಮನ ಸೆಳೆದರು.
ತಂಡದ ಮುಖ್ಯಸ್ಥ ಮಾದಾಳೆಪ್ಪ ಕಪ್ಪಾರಿ ನೇತೃತ್ವ ವಹಿಸಿದ್ದರು. ಫಕ್ಕೀರಪ್ಪ ಸೋಮಲಿಂಗಪ್ಪನವರ, ನಿಂಗಪ್ಪ ಕರಡೆಮ್ಮನವರ, ಬಸಪ್ಪ ಬೆಳ್ಳಿ, ರಾಮಪ್ಪ ಶೇಖಸನದಿ, ರಾಮಪ್ಪ ಬೆಂಕಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net