

ಅರಸೀಕೆರೆ : ವರ್ಗರಹಿತ ಸಮಾಜ ನಿರ್ಮಾಣ ಕಾರ್ಯಕ್ಕೆ ಸುತ್ತೂರು ಮಠದ ಕೊಡುಗೆ ಅಪಾರ ಎಂದು ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಹೇಳಿದರು. ಫೆ.6ರಿಂದ 11ರವರೆಗೆ 5 ದಿನ ನಡೆಯಲಿರುವ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವಿವೇಕಾನಂದ ಬಿ.ಇಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೀಳ್ಕೊಟ್ಟು ಅವರು ಮಾತನಾಡಿದರು. ಶಿವಶರಣರ ಆಶಯದಂತೆ ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೀಜ ಬಿತ್ತುವ ಮೂಲಕ ಸುತ್ತೂರು ಕ್ಷೇತ್ರ ನಾಡಿನ ಮನೆ ಮಾತಾಗಿದೆ. ಬಡವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಶ್ರೀ ಮಠ ಶಿಕ್ಷಣ, ಊಟ, ವಸತಿ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಿದೆ. ಅಂತಹ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದರು.
ಮುಖಂಡ ಜಿ.ಬಿ.ಶಶಿಧರ್ ಮಾತನಾಡಿದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಕುಡವಕ್ಕಲಗಿ, ರೈಲ್ವೆ ಮಹದೇವ್, ತಾಪಂ ಮಾಜಿ ಸದಸ್ಯ ಭೋಜಾ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ಕೆಂಕೆರಹಳ್ಳಿ ಶಿವನಂಜೇಗೌಡ, ದಂದೂರು ರವಿ, ಜಿವಿಟಿ ಬಸವರಾಜ್ ಇತರರು ಹಾಜರಿದ್ದರು.