ಗದಗ ನಗರದ ಜಾತ್ರೆಗಳಿಗೆ ನಾಡಿನಲ್ಲಿ ವಿಶಿಷ್ಠ ಸ್ಥಾನಮಾನವಿದೆ : ಶರಣ್ ಪಾಟೀಲ

LXT
LXT
Published on

ಗದಗ : ಗದಗ ಪರಿಸರ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಸರಾಗಿದ್ದು, ವಿಶೇಷವಾಗಿ ಜಾತ್ರಾ ಕಾರ್ಯಕ್ರಮಗಳಿಗೆ ನಾಡಿನಾದ್ಯಂತ ಹೆಸರಾಗಿದೆ. ಉಸಗಿನಗಟ್ಟಿಯ ಗಂಜಿಬಸವೇಶ್ವರ ಜಾತ್ರೆಗೆ ಸಹ ಅದರದ್ದೇ ಆದ ಐತಿಹಾಸಿಕತೆ ಇದೆ ಎಂದು ಉಸಿರು ಫೌಂಡೇಶನ್ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ಶರಣ್ ಪಾಟೀಲ ನುಡಿದರು.

ಅವರು ಇತ್ತೀಚೆಗೆ ನಗರದ ಉಸಿಗಿನಗಟ್ಟಿಯ ಗಂಜೀಬಸವೇಶ್ವರ ಜಾತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದೇಶದ ಬೆಳವಣಿಗೆಗಳನ್ನು ಗಮನಿಸುವುದಾದರೆ ಕಾಶ್ಮೀರ ಯುದ್ಧಭೂಮಿಯಾಗಿ ಪರಿವರ್ತನೆಯಾಗುತ್ತಿದ್ದು, ದೇಶದ ಯೋಧರು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಸಾಮಾಜಿಕ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದಾರೆ, ನಾವಿಲ್ಲಿ ರಂಗಭೂಮಿಯAಥ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಅಲ್ಲಿ ಯೋಧರು ಯುದ್ಧಭೂಮಿಯಲ್ಲಿ ಕಾದಾದಬೇಕಿದೆ ಎಂದರು.

ಎಸ್.ಎಸ್.ಎಲ್.ಸಿ ಫಲಿತಾಶಂದ ಕುರಿತು ಮಾತನಾಡಿದ ಅವರು ಗದಗ ಜಿಲ್ಲೆಯ ಫಲಿತಾಂಶದಲ್ಲಿ ಚೇತರಿಕೆ ಕಂಡುಬAದಿದ್ದರೂ ಇನ್ನೂ ಫಲಿತಾಂಶ ಸಮಾಧಾನಕರವಾಗಿಲ್ಲ, ಆದ್ದರಿಂದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಉಸಿರು ಫೌಂಡೇಶನ್ ನಿಂದ ಎಸ್.ಎಸ್.ಎಲ್.ಸಿಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕ ಪಡೆದ ಗದಗ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ನೀಡಲಾಗುವುದು ಎಂದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನಿಧ್ಯವಹಿಸಿದ್ದರು. ಶಿವಾನಂದ ಪಲ್ಲೇದ, ಪ್ರಶಾಂತ ಶಾಬಾದಿಮಠ, ಈರಣ್ಣ ಕರಿಬಿಷ್ಠಿ, ಎಫ್.ವಿ ಮರಿಗೌಡ್ರ, ಎಚ್.ಕೆ ಮುಲ್ಲಾ, ಎಂ.ಎಸ್ ಕರಿಗೌಡ್ರ, ರವಿ ಕಮತರ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲಿದ್ದರು. `ಅಕ್ಕ ಅಂಗಾರ ತಂಗಿ ಬಂಗಾರ’ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು, ಗಂಜೀಬಸವೇಶ್ವರ ದೇವಸ್ಥಾನದ ಸದ್ಭಕ್ತರು-ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net