ಜಾತ್ರಾ ಮಹೋತ್ಸವ ಇಂದಿನಿಂದ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕರ ಸಂಕ್ರಮಣ ನಿಮಿತ್ತ ಇಲ್ಲಿನ ಕಲಘಟಗಿ ರಸ್ತೆಯ ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಜ. 14, 15ರಂದು ಹಮ್ಮಿಕೊಳ್ಳಲಾಗಿದೆ.

14 ರಂದು ಬೆಳ್ಗೆ 6 ಗಂಟೆಗೆ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಲಾಗುವುದು. ಸಂಜೆ 4 ಗಂಟೆಗೆ ಪಲ್ಲಕ್ಕಿ ಉತ್ಸವ ಆರಂಭವಾಗಲಿದ್ದು, ದೇವಸ್ಥಾನದಿಂದ ಶಾಲ್ಮಲಾ ನದಿ ಉಗಮ ಸ್ಥಾನವರೆಗೆ ವಾದ್ಯ ಮೇಳಗಳೊಂದಿಗೆ ನಡೆಯಲಿದೆ. ಜ. 15ರಂದು ಸಂಜೆ 4.30ಕ್ಕೆ ದೇವಸ್ಥಾನದಿಂದ ಕಲಘಟಗಿ ರಸ್ತೆ ಮಹಾದ್ವಾರದವರೆಗೆ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀ ಸೋಮೇಶ್ವರ ದೇವರ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net