ಜಾತ್ರಾ ಮಹೋತ್ಸವ

15 vikram 5
Published on

ಧಾರವಾಡ: ನಗರದ ಕಲಘಟಗಿ ರಸ್ತೆಯ ಸೋಮೇಶ್ವರ ರಥೋತ್ಸವವು ನೂರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಸೋಮೇಶ್ವರ ಮೂರ್ತಿಗೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸಂಜೆ 4.30ಕ್ಕೆ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಎಸೆದು ಭಕ್ತಿ ಸರ್ಮಪಿಸಿದರು. ಭಕ್ತರು ಹರ ಹರ ಮಹಾದೇವ, ಸೋಮೇಶ್ವರ ಮಹಾರಾಜ ಕೀ ಜೈ ಘೋಷಣೆಗಳನ್ನು ಕೂಗಿದರು. ರಸ್ತೆಯ ಎರಡೂ ಬದಿ ರಥೋತ್ಸವ ವೀಕ್ಷಿಸಿಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಥೋತ್ಸವವು ದೇವಸ್ಥಾನದಿಂದ ಕಲಘಟಗಿ ರಸ್ತೆಯ ಮಹಾದ್ವಾರದವರೆಗೆ ಸಕಲ ವಾದ್ಯಮೇಳದೊಂದಿಗೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net