ಗುಬ್ಬಿ ಚನ್ನಬಸವೇಶ್ವರಸ್ವಾಮಿ ರಥೋತ್ಸವ ಸಂಪನ್ನ

13Gubbi Photo 01
Published on

ಗುಬ್ಬಿ : ಇತಿಹಾಸ ಪ್ರಸಿದ್ಧ ಗುಬ್ಬಿ ಗೋಸಲ ಚನ್ನಬಸವೇಶ್ವರಸ್ವಾಮಿ ಮಹಾರಥೋತ್ಸವ ಭಾನುವಾರ ಮಧ್ಯಾಹ್ನ 1.45ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕೈಂಕರ್ಯ ನಡೆದವು. ಸ್ವಾಮಿಯ ವಿಶೇಷ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆಹಣ್ಣು, ದವನ ತೂರಿ ಭಕ್ತಿ ಸಮರ್ಪಿಸಿತು.

’ರಷ್ಯಾ ಯೂಕ್ರೇನ್ ಯುದ್ಧ ನಿಲ್ಲಲಿ, ಶಾಂತಿ ನೆಲಸಲಿ’ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಭಕ್ತರು ರಥಕ್ಕೆ ತೂರಿ ಹರಕೆ ಮಾಡಿಕೊಂಡರು.

ಸಾವಿರಾರು ಜನ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದರು.

18 ಕೋಮಿನ ಸಹಕಾರದಲ್ಲಿ ದೇವಾಲಯ ಹಾಗೂ ಹೊರಾಂಗಣ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ತೊರೇಮಠದ ಶ್ರೀ ರಾಜಶೇಖರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಎಸ್.ಆರ್.ಶ್ರೀನಿವಾಸ್, ಮುಖಂಡರಾದ ಹೊನ್ನಗಿರಿಗೌಡ, ಬಿ.ಎಸ್.ನಾಗರಾಜು, ಉಪ ವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಬಿ.ಆರತಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net