ಕಳೆಗಟ್ಟಿದ ಶಂಭುಲಿಂಗೇಶ್ವರ ಸ್ವಾಮಿ ದನಗಳ ಜಾತ್ರೆ ; ಹಳ್ಳಿಕಾರು ರಾಸುಗಳ ಆಕರ್ಷಣೆ

IMG20220110111636
Published on

ತುರುವೇಕೆರೆ : ಕಳೆದರೆಡು ವರ್ಷಗಳಿಂದ ಕರೊನಾ ಹೊಡೆತದಿಂದ ಕಳೆಗುಂದಿದ್ದ ಪುರ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದನಗಳ ಜಾತ್ರೆ ಈ ಬಾರಿ ಆಕರ್ಷಕ ಹಳ್ಳಿಕಾರು ರಾಸುಗಳಿಂದ ಕಳೆಗಟ್ಟಿದೆ. ಗ್ರಾಮೀಣ ಸೊಗಡು ಬಿಂಬಿಸುವ ಈ ಜಾತ್ರೆ ಜ.5ರಂದು ಶುರುವಾಗಿದ್ದು, ಸಂಕ್ರಾಂತಿ ಹಬ್ಬದ ದಿನದಂದು ಶಂಭುಲಿಂಗೇಶ್ವರ ಸ್ವಾಮಿ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ, ಜನಗಳಿಲ್ಲದೆ ಇರುವುದರಿಂದ ಜಾತ್ರೆ ಈ ಬಾರಿ ಸಪ್ಪೆ ಎನಿಸಲಿದೆ.

ಶನಿವಾರ, ಭಾನುವಾರ ವೀಕೆಂಡ್ ಕರ್ಪೂ ಹಿನ್ನೆಲೆಯಲ್ಲಿ ಜಾತ್ರೆ ನಡೆಯುವ ಸಾಧ್ಯತೆ ಕಡಿಮೆ ಎಂದು ರೈತರು ಆತಂಕದಲ್ಲಿದ್ದರು. ಆದರೆ ಜಾತ್ರೆ ಕಮಿಟಿ ಮುಂಜಾಗ್ರಾತ ಕ್ರಮದೊಂದಿಗೆ ಕರೊನಾ ನಿಯಮ ಪಾಲಿಸಿ ಜಾತ್ರೆ ನಡೆಸಲು ಅನುವು ಮಾಡಿಕೊಟ್ಟಿದೆ. ಕರೊನಾ ಮಾರ್ಗಸೂಚಿಯಂತೆ ಶಂಭುಲಿಂಗೇಶ್ವರ ಸ್ವಾಮಿಗೆ ಬೆಳಗ್ಗೆ, ಸಂಜೆ ಪೂಜೆ ನಡೆಯುತ್ತಿದ್ದು, ನಂತರ ದೇವಸ್ಥಾನಕ್ಕೆ ಬೀಗ ಹಾಕಲಾಗುತ್ತದೆ, ದೇವರ ದರ್ಶನ ಹಾಗೂ ಪೂಜೆ ಅವಕಾಶ ಇರುವುದಿಲ್ಲ. ಈ ವರ್ಷ ದೇವಸ್ಥಾನದ ಆವರಣದಲ್ಲಿ ಬೃಹತ್ ಶಿವನಮೂರ್ತಿ ನಿರ್ಮಿಸಲಾಗಿದ್ದು, ಆಕರ್ಷಣೆಯಾಗಿದೆ.

ತುಮಕೂರು, ಮಂಡ್ಯ, ದೊಡ್ಡಬಳ್ಳಾಪುರ, ಕೋಲಾರ, ಚಿತ್ರದುರ್ಗ, ಹಾವೇರಿ, ದಾವಣಗೆರೆ ಸೇರಿ ಅನೇಕ ಜಿಲ್ಲೆಗಳಿಂದ ರೈತರು ಜಾತ್ರೆಗೆ ಬರುತ್ತಿದ್ದಾರೆ. ಪ್ರತಿ ನಿತ್ಯ ರಾಸುಗಳು ಜಾತ್ರೆಗೆ ಆಗಮಿಸುತ್ತಿವೆ. ಜಾತ್ರೆಯಲ್ಲಿ ಸಿಹಿ ತಿಂಡಿ ಅಂಗಡಿಗಳು, ಸಸ್ಯಹಾರಿ ಹಾಗೂ ಮಾಂಸಹಾರಿ ಹೋಟಲ್‌ಗಳು ಇವೆ. ಜಾತ್ರೆಯಲ್ಲಿ ಕರಕುಶಲ ವಸ್ತುಗಳು, ಕೃಷಿ ಉಪಕರಣಗಳ ಪ್ರದರ್ಶನ ಮಾರಾಟವಿರುತ್ತದೆ, ಅಲ್ಲದೆ ಉತ್ತಮ ರಾಸುಗಳನ್ನು ಜಾತ್ರೆಯಲ್ಲಿ ಮೆರವಣಿಗೆ ನಡೆಸಿ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.

ದುಬಾರಿ ಬೆಲೆಯ ದನಗಳು : ದೇಶಿ ಹಸುಗಳು, ನಾಟಿ ದನಗಳು, ಹಳ್ಳಿಕಾರ್ ದನಗಳು ಹೆಚ್ಚು ಮಾರಾಟಕ್ಕೆ ಪ್ರಸಿದ್ಧಿ ಹೊಂದಿದ್ದು, ರಾಸುಗಳ ಮಾರಾಟ ಖರೀದಿ ಸುಮಾರು 20 ಸಾವಿರದಿಂದ 3 ಲಕ್ಷ ರೂಪಾಯಿವರೆಗೆ ನಡೆಯುತ್ತದೆ. ಕೆಲವು ರೈತರು ದನಗಳ ಬಗ್ಗೆ ಹೆಚ್ಚು ಅಕ್ಕರೆ ಇರುವವರು ಶಾಮಿಯಾನ ಹಾಕಿಸಿಕೊಂಡು ಪ್ರತಿ ದಿನ ಶೃಂಗರಿಸಿ ನಿತ್ಯ ಬೆಳಗ್ಗೆ ಸಂಜೆ ರೆವೆಬೂಸ, ಇಂಡಿ, ಬೆಣ್ಣೆ, ತುಪ್ಪ ತಿನ್ನಿಸಿ ಹೆಚ್ಚು ಆರೈಕೆ ಮಾಡಿ ನೋಡಿಕೊಳ್ಳತ್ತಾರೆ.

ದನಗಳ ಜಾತ್ರೆ ನಡೆಯುವ ಜಾಗ ಸುಮಾರು ಹೆಕ್ಟೇರ್‌ನಲ್ಲಿದ್ದು, ಮರ ಗಿಡಗಳಿರುವುದರಿಂದ ನೆರಳಿನ ಸೌಕರ್ಯವಿದೆ. ಜಾತ್ರೆಗೆ ಬರುವ ರೈತರಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡುವುದರ ಜತೆಗೆ ಕರೊನಾ ಮಾರ್ಗಸೂಚಿ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ. ಗುಂಪು ಸೇರದಂತೆ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಲೋಹಿತ್, ಜಾತ್ರೆ ಕಮಿಟಿ ಸದಸ್ಯ, ಗ್ರಾಪಂ ಸದಸ್ಯ ದನಗಳ ಖರೀದಿಗೆ ಜಾತ್ರೆಯೆನ್ನೆ ರೈತರು ಅವಲಂಬಸಿದ್ದಾರೆ. ಆದರೆ ಇತ್ತಿಚೀನ ದಿನಗಳಲ್ಲಿ ರೈತರು ದನಗಳ ಸಾಕಾಣೆ ಕಡಿಮೆಯಾಗುತ್ತಿದ್ದು ದನಗಳ ಜಾತ್ರೆಗಳು ಕಳೆಗುಂದುತ್ತಿವೆ. ಆದರೆ, ಪುರ ಜಾತ್ರೆ ಪ್ರತಿ ವರ್ಷ ನಿಲ್ಲದೆ ನಡೆಯುತ್ತಿದೆ. ಸಾವಿರಾರು ಜೋಡಿಗಳಿರುತ್ತಿದ್ದ ರಾಸುಗಳ ಜಾತ್ರೆಗಳು ಇಂದು ನೂರಾರು ಸಂಖ್ಯೆಗೆ ಇಳಿದಿವೆ. ಶಂಕರಪ್ಪ, ರೈತ ತಾಲೂಕಿನಲ್ಲಿ ಜಾತ್ರೆ, ಉತ್ಸವಕ್ಕೆ ಅನುಮತಿ ನೀಡಿಲ್ಲ, ಸರ್ಕಾರದ ಆದೇಶ ಮೀರಿದರೆ ಸಂಬಂಧಪಟ್ಟ ಸಂಟಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಮಾರ್ಗಸೂಚಿ ಪಾಲಿಸಬೇಕು. ನಯಿಂ ಉನ್ನಿಸಾ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net