ಕಾರ್ತಿಕ ಮಾಸ ಜಾತ್ರೆ ಆರಂಭ

27kkr2(10-25 sasalu Kartika jatre aramba
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮವಾರ ಆರಂಭವಾದ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದಲ್ಲಿ ಶಾಸಕ ಎಚ್.ಟಿ. ಮಂಜು ಅವರಿಗೆ ಗ್ರಾಮಸ್ಥರು ಗೌರವಿಸಿದರು. ಗ್ರಾಮ ಮುಖಂಡರು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
Published on

ಕಿಕ್ಕೇರಿ: ಕಾರ್ತಿಕ ಮಾಸ ಭಕ್ತರಿಗೆ ಪವಿತ್ರವಾಗಿದ್ದು, ಭಕ್ತರು ಧಾರ್ಮಿಕ ಕೈಂಕರ್ಯಕ್ಕೆ ಸಹಬಾಳ್ವೆಯಿಂದ ಮುಂದಾಗಬೇಕು ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.

ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮವಾರ ಆರಂಭವಾದ ಕಾರ್ತಿಕ ಮಾಸ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿ, ರಾಜ್ಯಾದ್ಯಂತ ಅಪಾರ ಭಕ್ತರು ಸಾಸಲು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಭಕ್ತಿ, ಶಕ್ತಿಯ ಕ್ಷೇತ್ರ ಇದಾಗಿದೆ. ಮುಜರಾಯಿ ಇಲಾಖೆಗೆ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ಸೇರಿದೆ. ದೇಗುಲ ಜೀರ್ಣೊದ್ಧಾರ ಕ್ರಿಯೆ ನಡೆಯುತ್ತಿದೆ. ಬಹಳ ವಿಳಂಭವಾಗುತ್ತಿದ್ದು ತ್ವರಿತವಾಗಿ ಕಾಮಗಾರಿ ಮುಗಿದು ಭಕ್ತರಿಗೆ ದೇಗುಲ ದರ್ಶನ ವ್ಯವಸ್ಥೆ ಮಾಡಲು ಮುಂದಾಗಬೇಕು ಎಂದರು.

ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಕಾಡಬಾರದು. ಮೂಲ ಸೌಲಭ್ಯ ಒದಗಿಸಲು ಮುಜರಾಯಿ ಇಲಾಖೆ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಈರಾಜು, ಐನೋರಹಳ್ಳಿ ಮಲ್ಲೇಶ್, ಗ್ರಾಮ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net