ಸಂವಿಧಾನ ಜಾಗೃತಿ ಜಾಥಾ ವಾಕ್​ಥಾನ್​ಗೆ ಡಿಸಿ ಚಾಲನೆ

DC Jatha new
Published on

ಹುಬ್ಬಳ್ಳಿ : ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ವಾಕ್​ಥಾನ್ ಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗುರುವಾರದಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಶಕ್ತಿ, ನಮ್ಮ ಸಂವಿಧಾನ ನಮ್ಮ ಆತ್ಮ, ನಮ್ಮ ಸಂವಿಧಾನ ನಮ್ಮ ಪ್ರತಿಷ್ಠೆ, ನಮ್ಮ ಸಂವಿಧಾನ ನಮ್ಮ ಅಭಿವೃದ್ಧಿ ಸೇರಿದಂತೆ ಮುಂತಾದ ಘೊಷಣೆಗಳನ್ನು ವಾಕ್ ಥಾನ್ ನಲ್ಲಿ ಪಾಲ್ಗೊಂಡವರು ಕೂಗಿದರು.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ವಾಕ್​ಥಾನ್ ಸಾಗಿತು.

ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಮಾಜಿ ದೇವದಾಸಿಯರು, ಮಹಿಳಾ ಕಾರ್ಯಕರ್ತೆಯರು, ಸಾರ್ವಜನಿಕರು ಸಂವಿಧಾನ ಜಾಗೃತಿ ವಾಕ್​ಥಾನ್​ನಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net