ತಿ.ನರಸೀಪುರದಲ್ಲಿ ವಿದ್ಯಾರ್ಥಿಗಳಿಂದ ಜಾಥಾ

1
ತಿ.ನರಸೀಪುರ ಪಟ್ಟಣದ ಸೇಂಟ್ ಮೇರಿಸ್ ಆಂಗ್ಲ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದನ ಆಚರಿಸಲಾಯಿತು. ಕ್ರಿಸ್ಟೋಪರ್, ಉಪ ಪ್ರಾಂಶುಪಾಲ ಗೋವಿಂದ್, ಶಿಕ್ಷಕರಾದ ಕರುಣೇಶ್, ಜಫೀನ್, ವಿಘ್ನೇಶ್, ಜಯಲಕ್ಷ್ಮೀ, ಸಿನ್ಸಿ ಇತರರಿದ್ದರು.
Published on

ತಿ.ನರಸೀಪುರ: ವಿಶ್ವ ಪರಿಸರ ದಿನ ಅಂಗವಾಗಿ ಪಟ್ಟಣದ ಸೇಂಟ್ ಮೇರಿಸ್ ಆಂಗ್ಲ ಶಾಲೆಯಲ್ಲಿ ಬುಧವಾರ ಪರಿಸರ ಕಾಳಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವಿದ್ಯಾರ್ಥಿಗಳು ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸುವ ಮೂಲಕ ಪರಿಸರ ಉಳಿಸುವ ಪ್ರತಿಜ್ಞೆ ಕೈಗೊಂಡರು.

ನಂತರ ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಜತೆಗೂಡಿ ಶಾಲೆಯಿಂದ ಮೆರವಣಿಗೆಯಲ್ಲಿ ಹೊರಟರು. ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಶಿಕ್ಷಣಾಧಿಕಾರಿಗಳ ಕಚೇರಿ, ಕೆನರಾ ಬ್ಯಾಂಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ಶಾಲೆ ಪ್ರಾಂಶುಪಾಲ ಕ್ರಿಸ್ಟೋಪರ್, ಉಪ ಪ್ರಾಂಶುಪಾಲ ಗೋವಿಂದ್, ಶಿಕ್ಷಕರಾದ ಕರುಣೇಶ್, ಜಫೀನ್, ವಿಘ್ನೇಶ್, ಜಯಲಕ್ಷ್ಮೀ, ಸಿನ್ಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net