

ಗುಂಡ್ಲುಪೇಟೆ : ಭಾರತೀಯ ಜೀವವಿಮಾ ನಿಗಮದ 69 ನೇ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದ ಅಧಿಕಾರಿ ಹಾಗೂ ಏಜೆಂಟರು ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿದರು.
ಕಿತ್ತೂರುರಾಣಿ ರಸ್ತೆ, ಚಾಮರಾಜನಗರ ರಸ್ತೆ ಹಾಗೂ ಪ್ರಮುಖರಸ್ತೆಗಳಲ್ಲಿ ಸಾಗಿ ಜೀವವಿಮಾನಿಗಮದಿಂದ ಸಾರ್ವಜನಿಕರ ಜೀವ ಹಾಗೂ ಜೀವನದ ಭದ್ರತೆ ಬಗ್ಗೆ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸ್ಯಾಟಲೈಟ್ ಶಾಖೆಯ ವ್ಯವಸ್ಥಾಪಕ ದರ್ಶನ್ ಅಹಲ್ಯ, ಅಭಿವೃದ್ದಿ ಅಧಿಕಾರಿಗಳಾದ ಜಿ.ಎನ್.ಮಹೇಶ್, ಚಂದ್ರಶೇಖರ್, ಸುನಿಲ್, ಮೇಘ ಕಶ್ಯಪ್, ಏಜೆಂಟರಾದ ಶಿವಪ್ರಸಾದ್, ಮಾಧು, ಅರುಣ್, ಶಿವಕುಮಾರಸ್ವಾಮಿ, ಪ್ರಭು, ಮಹೇಶ್, ರಾಘವೇಂದ್ರರಾಜ್, ಗೋವಿಂದು ಹಾಗೂ ಇತರರು ಇದ್ದರು.