ಐಮಂಗಲ: ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳಲು ಗ್ರಾಮದಲ್ಲಿ ಶನಿವಾರ ಪಂಜು ಮೆರವಣಿಗೆ ನಡೆಸಲಾಯಿತು. ಪಿಡಿಒ ಎಂ.ಶಶಿಕಲಾ, ಸಿಬ್ಬಂದಿ ಪುಷ್ಪಾ, ಚಂದನಾ, ತಿಪ್ಪೇಶ್, ರಮೇಶ್, ಅಂಗನವಾಡಿ ಶಿಕ್ಷಕಿಯರಾದ ಇ.ಎಚ್.ಅರುಣಕುಮಾರಿ, ಕೆ.ಸುಧಾಮಣಿ ಇದ್ದರು.