

ಹಂಪಾಪುರ: ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು.
ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಶಾಲಾ ಬಾಲಕಿಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಸ್ತಬ್ಧಚಿತ್ರ, ಸಾರ್ವಜನಿಕರಿಂದ ಬೈಕ್ ರ‌್ಯಾಲಿಯೊಂದಿಗೆ ಗ್ರಾಮದ ಮುಖ್ಯರಸ್ತೆ ಮೂಲಕ ಮೆರವಣಿಗೆ ಸಾಗಿತು. ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್, ಸಂವಿಧಾನದ ಆಶಯಗಳು ಈಡೇರಲು ಎಲ್ಲರೂ ಸಂಕಲ್ಪ ಮಾಡಿದರೆ ದೇಶ ಪ್ರಗತಿ ಹೊಂದುತ್ತದೆ ಎಂದರು. ಉಪ ತಹಸೀಲ್ದಾರ್ ಸಂಜೀವ್ ಕುಮಾರ್, ರಾಜಸ್ವ ನಿರೀಕ್ಷಕ ಯೋಗೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಕೃಷಿ ಅಧಿಕಾರಿ ಸಿದ್ದಪ್ಪ ಸ್ವಾಮಿ, ಮುಖಂಡರಾದ ನರಸಿಂಹಮೂರ್ತಿ, ಬಸವರಾಜಪ್ಪ, ಮುರಳಿಗೌಡ, ನಂದೀಶ್, ಪಿ.ಕೆ. ಶಿವರಾಜು, ಸಿದ್ದರಾಜು, ಪುಟ್ಟರಾಜು, ಪಿಡಿಒಗಳಾದ ಸೌಮ್ಯಾ, ಗಣೇಶ್, ನಿವೇದಿತಾ ಇತರರು ಇದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ನಂತರ ರಥ ಹೊಮ್ಮರಗಳ್ಳಿ, ಕಂಚಮಳ್ಳಿ ಗ್ರಾಮಕ್ಕೆ ತೆರಳಿತು.