

-ಸಹಸ್ರಾರು ಭಕ್ತರ ಹರ್ಷೋದ್ಗಾರ
ಬೆಳಗಾವಿ: ರಾಜ್ಯ, ನೆರ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಧರ್ಮ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.
ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಮಂಗಳವಾರ ಸಹಸ್ರಾರು ಭಕ್ತರ ಹರ್ಷೋದ್ಗಾರದ ಮಧ್ಯ ಅತ್ಯಂತ ವೈಭವದ ಮೆರವಣಿಗೆ ಮೂಲಕ ನಡೆದ ರಥೋತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ನಾನಾ ಮೂಲೆಗಳಿಂದ ಹಾಗೂ ಸುತ್ತಲಿನ ಗ್ರಾಮಗಳಿಂದ ಎತ್ತಿನ ಗಾಡಿಯ ಮೂಲಕ ಮತ್ತು ಪಾದಯಾತ್ರೆಯ ಮೂಲಕ ಅಪಾರ ಜನಸ್ತೋಮ ಸೇರಿ ಜಾತ್ರಾ ಉತ್ಸವಕ್ಕೆ ಮೆರುಗು ನೀಡಿದರು.
ಜಾತ್ರೆಯಲ್ಲಿ ಗಜರಾಜನ ಮೆರವಣಿಗೆ, ನಂದಿಕೋಲು, ವೀರಗಾಸೆ, ಸಂಬಾಳ, ವೀರ ಪುರವಂತರು, ಸಕಲ ಮಂಗಲ ವಾದ್ಯಮೇಳಗಳು ಮೆರವಣಿಗೆ ವೈಭವ ಇಮ್ಮಡಿಗೊಳಿಸಿತು.