ಮಲ್ಲಿಗೆ ಕೃಷಿ ತರಬೇತಿ

New Project (45)
Published on

ಬೆಳ್ತಂಗಡಿ: ತಾಲೂಕು ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ ಮುಂಡತ್ತೊಡಿ ಶಾಲೆಯಲ್ಲಿ ನಡೆಯಿತು.

ಮುಂಡತ್ತೊಡಿ ಶಾಲೆಯ ಮುಖ್ಯಶಿಕ್ಷಕಿ ಸೇವಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಲ್ಲಿಗೆ ಕೃಷಿ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ತಾಲೂಕು ಯೋಜನಾಧಿಕಾರಿ ಸುರೇಂದ್ರ ಮಾತನಾಡಿ, ಕೇಂದ್ರದ ಸದಸ್ಯರಿಗೆ ಮಲ್ಲಿಗೆ ಗಿಡಗಳನ್ನು ಉಚಿತವಾಗಿ ನೀಡಿ ಮಾಹಿತಿಯನ್ನು ನೀಡಿ ಸ್ವಉದ್ಯೋಗ ಮಾಡಲು ಪ್ರೇರಣೆ ನೀಡುತ್ತಿದ್ದು ಗಿಡ ನಾಟಿ ಮಾಡಿ ಬೆಳೆಸಿ ಉತ್ತಮ ಆದಾಯ ಗಳಿಸುವಂತೆ ತಿಳಿಸಿದರು.

ಸಿದ್ದವನ ನರ್ಸರಿಯ ಯೋಜನಾಧಿಕಾರಿ ದಯಾನಂದ ಮಾತನಾಡಿ, ಗಿಡದ ಆಯ್ಕೆ ಮಾಡುವ ಕ್ರಮ ಘೋಷಣೆಯ ಬಗ್ಗೆ ಸ್ಥಳದ ಅವಕಾಶ ಇದ್ದಲ್ಲಿ ನೆಲದಲ್ಲಿ ನಾಟಿ ಮಾಡುವ ಬಗ್ಗೆ ಸ್ಥಳಾವಕಾಶ ಇಲ್ಲದೇ ಇದ್ದಲ್ಲಿ ಗ್ರೋಬ್ಯಾಗ್‌ನಲ್ಲಿ ಗಿಡವನ್ನು ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಒಕ್ಕೂಟದ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಸೇವಾಪ್ರತಿನಿಧಿ ಪ್ರೇಮಾರವರು ಸ್ವಾಗತಿಸಿ, ವಲಯ ಮೇಲ್ವಿಚಾರಕಿ ವನಿತಾ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net