ಫೆ.10 ರಂದು ಜಯ-ವಿಜಯ ಜೋಡುಕರೆ ಕಂಬಳ

mng- jan 16- jappina mogaru Jaya vijaya
ಜಪ್ಪಿನಮೊಗರು ನಗರ ಪ್ರದೇಶದ ನೇತ್ರಾವತಿ ನದಿ ತೀರದಲ್ಲಿ ಫೆ.10 ರಂದು ನಡೆಯಲಿರುವ 14ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಓಷಿಯನ್ ಪರ್ಲ್ ಹೊಟೇಲ್‌ನಲ್ಲಿ ಮಂಗಳವಾರ ಶಾಸಕ ಡಿ. ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.ಕಂಬಳ ಸಮಿತಿ ಗೌರವ ಸಲಹೆಗಾರ ಭುಜಂಗ ಶೆಟ್ಟಿ,ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ ಮನ್ಕುತೋಟಗುತ್ತು, ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣ್‌ಚಂದ್ರ ಆಳ್ವ ತಿರುವೈಲ್ ಗುತ್ತು ಮೊದಲಾದವರಿದ್ದರು.
Published on

ಮಂಗಳೂರು: ಜಪ್ಪಿನಮೊಗರು ನಗರ ಪ್ರದೇಶದ ನೇತ್ರಾವತಿ ನದಿ ತೀರದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೇಷ ಜೆ. ಜಯ ಗಂಗಾಧರ ಶೆಟ್ಟಿ ಸ್ಮರಣಾರ್ಥ 14ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಫೆ.10 ರಂದು ಜಯ-ವಿಜಯ ಜೋಡುಕರೆ ಕಂಬಳ10ರಂದು ನಡೆಯಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅನಿಲ್ ಜೆ. ಶೆಟ್ಟಿ ಮನ್ಕುತೋಟಗುತ್ತು ಅಧ್ಯಕ್ಷತೆಯ ಸಮಿತಿ ಹಾಗೂ ಸುಧಾಕರ ಶೆಟ್ಟಿ ಎಂ.ಡಿ. ಸುತೇಜ್ ಎಂಟರ್‌ಪ್ರೈಸಸ್ ಮಾರ್ಗದರ್ಶನದಲ್ಲಿ ಕಂಬಳ ನಡೆಯಲಿದೆ. ಬೆಳಗ್ಗೆ 8.30ಕ್ಕೆ ಜಿ.ಆರ್. ಮೆಡಿಕಲ್ ಕಾಲೇಜಿನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ,ವಿಠಲದಾಸ್ ತಂತ್ರಿವರ್ಯರಿಂದ ಉದ್ಘಾಟನೆ ನಡೆಯಲಿದೆ. ಕಟೀಲು ಶ್ರೀ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಾನಗರಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಸಹಿತ ಜನಪ್ರತಿನಿಧಿಗಳು, ಚಲನಚಿತ್ರ ನಟರು, ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಈ ಬಾರಿ ವಿಜೇತ ಕೋಣಗಳಿಗೆ ಚಿನ್ನದ ಪದಕಗಳೊಂದಿಗೆ ಶಾಶ್ವತ ಲಕವನೀಡಲಾಗುವುದು. ಮುಂದಿನ ವರ್ಷ ಜಪ್ಪಿನಮೊಗರು ಕಂಬಳಕ್ಕೆ 15ವರ್ಷ ತುಂಬಲಿದ್ದು, ಅದನ್ನು ಮತ್ತಷ್ಟು ವೈವಿಧ್ಯಪೂರ್ಣವಾಗಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.ಕಂಬಳ ಸಮಿತಿ ಗೌರವ ಸಲಹೆಗಾರ ಭುಜಂಗ ಶೆಟ್ಟಿ ಮಾತನಾಡಿ, ಕಳೆದ ಬಾರಿಯಂತೆ 24ಗಂಟೆಯಲ್ಲಿ ಕಂಬಳ ಮುಗಿಸಲು ನಾವು ಬದ್ಧರಾಗಿದ್ದು, ಬೆಳಗ್ಗೆ 8.30ಕ್ಕೆ ನೇಗಿಲು ಕಿರಿಯ, ಬೆಳಗ್ಗೆ 11 ಕ್ಕೆ ಹಗ್ಗ ಕಿರಿಯ, 12ಕ್ಕೆ ನೇಗಿಲು ಹಿರಿಯ, 1ಕ್ಕೆ ಹಗ್ಗ ಹಿರಿಯ, ಕನ ಹಲಗೆ ಮತ್ತು ಅಡ್ಡ ಹಲಗೆ ಮಧ್ಯಾಹ್ನ 2ಕ್ಕೆ ಸ್ಪರ್ಧೆ ಇಳಿಯಲಿದೆ. ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ- ಕಿರಿಯ, ನೇಗಿಲು ಕಿರಿಯ- ಹಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ ಮನ್ಕುತೋಟಗುತ್ತು, ಕಾರ್ಯಾಧ್ಯಕ್ಷರಾದ ವೀಣಾಮಂಗಳ, ಪ್ರವೀಣ್‌ಚಂದ್ರ ಆಳ್ವ ತಿರುವೈಲ್ ಗುತ್ತು, ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ ಎಕ್ಕೂರು, ಸಂತೋಷ್ ಆಳ್ವ ತೋಚಿಲಗುತ್ತು, ಪ್ರಧಾನ ಕಾರ್ಯದರ್ಶಿ ಉಮೇಶ್ ಅತಿಕಾರಿ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಕಶಾಂತ್ ಮೇಲಾಂಟ, ರಾಜಾನಂದ ರೈ ಕೊಪ್ಪರಿಗೆ, ನಿಶಾನ್ ಪೂಜಾರಿ, ಚಿತ್ತರಂಜನ್ ಬೋಳಾರ್, ರಾಕೇಶ್ ರೈ ಎಸ್.ಎನ್., ಗಣೇಶ್ ಶೆಟ್ಟಿ, ಅಕ್ಷಯ, ಗಣೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು, ಜೆ. ನಾಗೇಂದ್ರ ಕುಮಾರ್, ಸಾಯುದ್ದೀನ್, ನಾರಾಯಣ ಪೂಜಾರಿ ಮುಗೇರುಮನೆ, ಕಿರಣ್ ರೈ, ವಿಜಯ ಕುಮಾರ್, ಪಾಲಿಕೆಯ ಮಾಜಿ ಸದಸ್ಯ ಸುರೇಂದ್ರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net