ಜಪ್ಪಿನಮೊಗರು ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಉತ್ಸವ

mng--16 may Jappinamogaru
Published on

ಮಂಗಳೂರು : ಜಪ್ಪಿನಮೊಗರಿನ ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಳ ಸಮುಚ್ಚಯದ ಗುರುವನ ಶ್ರೀ ದುರ್ಗಾ ಕ್ಷೇತ್ರದ 13ನೇ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಉತ್ಸವವು ಇತ್ತೀಚೆಗೆ ಜರುಗಿತು.


ಮರಕಡ ಶ್ರೀಗುರು ಪರಾಶಕ್ತಿ ಮಠದ ಮಾತೆ ಶಕುಂತಲಾ ಅಮ್ಮ, ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಅವರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಾಜಿ ಸಚಿವ, ಶ್ರೀ ಕ್ಷೇತ್ರ ನಿರ್ಮಾಣದ ರೂವಾರಿ ಕೃಷ್ಣ.ಜೆ.ಪಾಲೇಮಾರ್ ಮುಂದಾಳತ್ವದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು.


ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ತಂಡಗಳಿಂದ ನಾಮಾರ್ಚನೆ, ಅನ್ನ ಸಂತರ್ಪಣೆ, ಸೋಮವಾರ ಸಾಮೂಹಿಕ ಚಂಡಿಕಾಯಾಗ, ಅನ್ನ ಸಂತರ್ಪಣೆ ಜರುಗಿತು. ಸಾಮೂಹಿಕ ಚಂಡಿಕಾ ಯಾಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು.


ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಕ್ಷೇತ್ರದ ನಿರ್ಮಾಣದ ರೂವಾರಿ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಮಳೆ, ಬೆಳೆ ಎಲ್ಲೆಡೆಯೂ ಸಮೃದ್ಧಿಯಾಗಿ ಆಗಿ ಲೋಕ ಸುಭಿಕ್ಷೆಗೊಳ್ಳಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net