ತಲಕಾವೇರಿಯಲ್ಲಿ ಶ್ರೀ ಅತಿರುದ್ರ ಜಪಯಜ್ಞ

japa yajna
Published on

ಭಾಗಮಂಡಲ:

ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಕಾವೇರಿ ನದಿ ಉಗಮ ಸ್ಥಾನ ಪವಿತ್ರ ಕ್ಷೇತ್ರ ತಲಕಾವೇರಿ ಸನ್ನಿಧಿಯಲ್ಲಿ ಭಾನುವಾರದಿಂದ ಶ್ರೀ ಅತಿರುದ್ರ ಜಪಯಜ್ಞ ಆರಂಭವಾಗಿದೆ. ಕ್ಷೇತ್ರದ ಪ್ರಧಾನ ಅರ್ಚಕ ತಲಕಾವೇರಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಶ್ರೀ ಅತಿರುದ್ರ ಜಪಯಜ್ಞ ನಡೆಯುತ್ತಿದೆ.

ಶ್ರೀ ಕ್ಷೇತ್ರ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ ಅವರು ಈ ಪವಿತ್ರ ಕಾರ್ಯ ಆರಂಭಕ್ಕೂ ಮೊದಲು ಶ್ರೀ ಅಗಸ್ತ್ಯಶ್ವರ ಸನ್ನಿದಿಯಲ್ಲಿ ಫಲತಾಂಬೂಲದೊAದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಶ್ರೀಕಾಂತಾನAದ ಸರಸ್ವತಿ ಮಹಾರಾಜ್ ಅವರ ಸಂಕಲ್ಪದAತೆ ನಡೆಯಿತ್ತಿರುವ ಈ ಜಪಯಜ್ಞದಿಂದ ಶ್ರೀ ರುದ್ರ ದೇವರ ಕೃಪಾಶಿರ್ವಾದ ಲೋಕಕ್ಕೆ ಲಭಿಸಲಿ. ಪಾಕಿಸ್ತಾನ - ಭಾರತ ನಡುವಿನ ಯುದ್ಧದ ಕಾರ್ಮೋಡ ಸ್ಥಿತಿ ಶಾಂತವಾಗಲಿ. ಪೆಹಲ್ಗಾಂವ್‌ನಲ್ಲಿ ಉಗ್ರರಿಂದ ಹತ್ಯೆಗೊಳಗದವರಿಗೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.

ಈ ಜಪಯಜ್ಞ ಮೇ 21 ರ ತನಕ ನಡೆಯಲಿದ್ದು, ಮೇ 19 ರಂದು ಮಡಿಕೇರಿಯ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ, ಮೇ 21 ರಂದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇಗುಲದಲ್ಲಿ

ಶ್ರೀ ಚಂಡಿ ಹೋಮ ನಡೆಯಲದೆ. ಈ ಎಲ್ಲಾ ಕಾರ್ಯಕ್ರಮ ಸಾಂಗವಾಗಿ ನಡೆಯಲಿ ಎಂದು ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಮಿತ್ತೂರು ಈಶ್ವರಭಟ್ ಪ್ರಾರ್ಥನೆ ಸಲ್ಲಿಸಿದರು.

ರುದ್ರ ಜಪಯಜ್ಞ ತಲಕಾವೇರಿಯಲ್ಲಿನರುವ ಶ್ರೀ ಕೈಲಾಸ ಆಶ್ರಮ ದಲ್ಲಿ ನಡೆಯಲಿದೆ ಎಂದು ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ತಿಳಿದರು. ಸಮಿತಿಯ ಸಂಚಾಲಕ ಉದಯಕುಮಾರ್, ಸಮಿತಿಯ ಸದಸ್ಯರುಗಳಾದ ಎಸ್.ಎಸ್. ಸಂಪತ್ ಕುಮಾರ್, ಬಿ. ಸಿ. ದಿನೇಶ್, ಪ್ರಧಾನ ಅರ್ಚಕ ಗುರುರಾಜ್ ಆಚಾರ್, ರವಿ ರಾಮಾನುಜಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net