

ರಾಯಚೂರು ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಂತ್ರಾಲಯ ರಾಘವೇಂದ್ರ ಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ಅಸಮಾಧಾನ ವ್ಯಕ್ತ ಪಡಿಸಿದರು.
ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ದೇಶದ ಸಂವಿದಾನದಲ್ಲಿ ಪರಿಷ್ಕರಣೆಯ ಸ್ವಾತಂತ್ರ‍್ಯದ ಅಡಿಯಲ್ಲಿ ಯಾವುದೇ ವ್ಯಕ್ತಿಯು ತಮ್ಮದೆ ಧರ್ಮದ ಆಚರಣೆ ಮಾಡಬಹುದೆಂದು ಸಂವಿಧಾನದಲ್ಲಿ ಅವಕಾಶ ನಿಡಲಾಗಿದೆ. ಆದರೆ ಧರ್ಮ ಸ್ವಾತಂತ್ರ‍್ಯವನ್ನು ಹರಣ ಮಾಡುತ್ತಿರುವುದು ಖಂಡನೀಯವಾಗಿದೆ.
ಇದು ಕೇವಲ ವಿಪ್ರ ಸಮುದಾಯದ ಕುರಿತು ನಾವು ಮಾತನಾಡುತ್ತಿಲ್ಲ. ಯಾವುದೇ ಸಮಾಜ,ಧರ್ಮದ ಕುರಿತು ವಿರೋಽ ಚಟುವಟಿಕೆಗಳು ನಡೆದರೆ ಅತ್ಯಂತ ಹೇಯಾವಾಗಿರುವಂತದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ.
ರಾಜ್ಯದ ಸಚಿವರು ಕಣ್ಣೋರಿಸುವ ಕೆಲಸ ಮಾಡದೆ ನೊಂದ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ಒದಗಿಸಿ ಮುಂದೆ ರೀತಿಯ ಧರ್ಮ ವಿರೋಽ ಘಟನೆಗಳು ಮರುಕಳಿಸದಂತೆ ಸರ್ಕಾರ ಹೆಚ್ಚೆತ್ತುಗೊಳ್ಳಬೇಕು. ಇಲ್ಲದಿದ್ದರೆ ಸಮಸ್ತ ಹಿಂದೂ ಧರ್ಮದವರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.