

ಸಿರಗುಪ್ಪ: 12 ಅಂಶಗಳ ಬೇಡಿಕೆಗಾಗಿ ಜೆಸಿಟಿಯು ಕರೆ ಮೇರೆಗೆ ಜ.8ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ತಿಪ್ಪಯ್ಯ ಹೇಳಿದರು. ಮುಷ್ಕರ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಆರ್ಥಿಕ ನಿಧಾನಗತಿಗೆ ಕಾರಣವಾಗಿರುವ ನೀತಿಗಳಿಂದ ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಉದ್ಯೋಗ, ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾರ್ವಜನಿಕರ ಉದ್ದಿಮೆಗಳ ಷೇರು ವಿಕ್ರಯವನ್ನು ತಡೆಯಬೇಕು. ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್, ವಿಮೆ ಮುಂತಾದ ನಿರ್ಣಾಯಕ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ತಡೆಯಬೇಕು ಎಂದರು. ತಾಲೂಕು ಅಧ್ಯಕ್ಷೆ ಬಿ.ಉಮಾದೇವಿ, ಉಪಾಧ್ಯಕ್ಷ ಎಚ್.ಬಿ.ಓಬಳೇಶಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಸುರೇಶ. ಪದಾಧಿಕಾರಿಗಳಾದ ದುರುಗಮ್ಮ, ಬಿ.ಎಲ್.ಈರಣ್ಣ, ನೀಲಾವತಿ, ರಾಜಪ್ಪಸಾಬ್, ಲತೀಫ್‌ಖಾಜಾ, ಕೆ.ಬಸವರಾಜ, ಎಂ.ಲಕ್ಷ್ಮಮ್ಮ, ಡಿ.ರಾಮಣ್ಣ, ಸುಬ್ಬಾರೆಡ್ಡಿ ಇದ್ದರು.