ಜಂತ್ಲಿ ಶಿರೂರ ಗ್ರಾಪಂ ಅಧ್ಯಕ್ಷರಾಗಿ ರತ್ನವ್ವಆಯ್ಕೆ

GRAMA PANCHYAT
Published on

ಡಂಬಳ: ಸಮೀಪದ ಜಂತ್ಲಿ ಶಿರೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಂಗಳವಾರ ಜರುಗಿತು.
ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರತ್ನವ್ವ ರಾಜಕುಮಾರ ಪೂಜಾರ, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ರವಿ ನಿಂಗಪ್ಪ ದೊಡ್ಡಮನಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಉದಯಕುಮಾರ ಯಲಿವಾಳ ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ ಲೀಲಾ ಹನಮಂತಪ್ಪ ಪೂಜಾರ, ಅಂದಮ್ಮ ಹನಮಪ್ಪ ಕೋಣಿ, ಶರಣಪ್ಪ ನಿಂಗಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಗಂಗಪ್ಪ ಹೊಂಬಳ, ಜೈತುನಬಿ ರಾಜಸಾಬ್ ಬಳ್ಳಾರಿ, ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಹೇಮಣ್ಣ ಪೂಜಾರ, ಮುಖಂಡರಾದ ಶರಣಪ್ಪ ಶಿರುಂಧ, ರಾಜಕುಮಾರ ಪೂಜಾರ, ಶೇಖಪ್ಪ ದೇಸಾಯಿ, ನಿಂಗಪ್ಪ ದೊಡ್ಡಮನಿ, ಪರಮೇಶಪ್ಪ ಚಿಗರಿ, ದೇವೆಂದ್ರಪ್ಪ ಹೊಂಬಳ, ಈರಣ್ಣ ವಾಘಮೊಡಿ, ಶಿವಪ್ಪ ಶಿರುಂದ, ಭೀರಪ್ಪ ಪೂಜಾರ, ಬಸವರಾಜ ಪೂಜಾರ, ನೀಲಪ್ಪ ದೊಡ್ಡಮನಿ, ಬಸವರಾಜ ಕಲಕೇರಿ, ಈರಪ್ಪ ಸಲಗಾರ, ವಿಜಯಕುಮಾರ ಶಿರುಂದ, ಪರಶುರಾಮ ಹುಬ್ಬಳ್ಳಿ, ಸಿದ್ದಪ್ಪ ಪೂಜಾರ, ರಮೇಶ ಪಾಟೀಲ, ಲಕ್ಷ್ಮಣ ಪೂಜಾರ, ಶರಣಪ್ಪ ಕರಮುಡಿ, ಪಿಡಿಒ ವಸಂತ ಗೋಕಾಕ, ಕಾರ್ಯದರ್ಶಿ ಸೋಮಶೇಖರ ವಿರೇಶಣ್ಣವರ, ಕರವಸೂಲಿಗಾರ ಬಸವರಾಜ ಮೇವುಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net