ಮಾಧವನ ಸಂದೇಶ ಇಂದಿಗೂ ಪ್ರಸ್ತುತ: ಗೋಪಾಲ್ ಕಲ್ಲುಗುಡ್ಡೆ ಅನಿಸಿಕೆ

22-krishna
Published on

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆ ನೆರವೇರಿತು. ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಅಧ್ಯಕ್ಷತೆ ವಹಿಸಿದ್ದರು.

ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮಾತನಾಡಿ, ಧರ್ಮದ ಸಂರಕ್ಷಣೆಗಾಗಿ ಅವತಾರವೆತ್ತಿದ ಶ್ರೀಕೃಷ್ಣ ಅಧರ್ಮದ ಹಾದಿಯಲ್ಲಿ ನಡೆಯುತ್ತಿದ್ದ ತನ್ನ ಬಂಧುಗಳನ್ನು ಕೂಡ ಕ್ಷಮಿಸಲಿಲ್ಲ. ಧರ್ಮ ಮೀರಿದವರಿಗೆ, ಅಧರ್ಮಕ್ಕೆ ಅವಕಾಶವಿಲ್ಲ ಎಂದು ತೋರಿಸಿಕೊಟ್ಟ. ಎಂದಿಗೂ ಸ್ವಾರ್ಥಕ್ಕೆ ಬಲಿಯಾಗದಿರಿ. ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ. ಅದಕ್ಕೆ ಪ್ರತಿಫಲ ನಿರೀಕ್ಷೆ ಮಾಡದಿರಿ. ನಿಮಗೆ ಒಳ್ಳೆಯದೇ ಆಗುತ್ತದೆ ಎನ್ನುವ ಶ್ರೀಕೃಷ್ಣನ ಸಂದೇಶ ಇಂದಿಗೂ ಪ್ರಸ್ತುತ ಎಂದರು.

ಯಾದವ ಸಂಘದ ಕಡಬ ಪ್ರಾದೇಶಿಕ ಸಮಿತಿ ಗೌರವಾಧ್ಯಕ್ಷ ಕೆ.ಪಿ.ಮೋಹನ್ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸರ್ಕಾರದ ಮೂಲಕ ನಡೆಯುತ್ತಿರುವುದು ಶ್ಲಾಘನಾರ್ಹ. ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಈ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲು ನಮ್ಮ ಸಂಘಟನೆಯ ಸಹಕಾರವಿದೆ ಎಂದರು.

ಸಾಮಾಜಿಕ ಮುಂದಾಳು ರೋಯಿ ಅಬ್ರಹಾಂ ಪದವು, ಉಪತಹಸೀಲ್ದಾರ್ ಶಾಯದುಲ್ಲಾ ಖಾನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕಡಬ ಪ.ಪಂ.ಸಿಬ್ಬಂದಿ ಹರೀಶ್ ಬೆದ್ರಾಜೆ, ಸುಳ್ಯ ಯಾದವ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಅಡ್ಡಬೈಲು, ಯಾದವ ಸಂಘದ ಕಡಬ ಪ್ರಾದೇಶಿಕ ಸಮಿತಿ ಅಧ್ಯಕ್ಷೆ ಸೀತಾ ಚಂದ್ರನ್, ಕೋಶಾಧಿಕಾರಿ ಶ್ರೀಧರ ಮಣಿಯಾಣಿ, ಉಪಾಧ್ಯಕ್ಷೆ ಗಾಯತ್ರಿ ಶ್ರೀಧರ್, ಕಡಬ ಯಾದವ ಮಹಿಳಾ ವೇದಿಕೆ ಉಪಾಧ್ಯಕ್ಷೆ ಮೀನಾಕ್ಷಿ ಅಡ್ಡಬೈಲು, ಪ್ರಮುಖರಾದ ನಾರಾಯಣ ಮಣಿಯಾಣಿ, ಗಿರೀಶ್ ಕಡಬ, ಕಮಲಾಕ್ಷಿ ಮೋಹನ್, ಮೀನಾಕ್ಷಿ ಬೊಳ್ಳೂರು, ಸುಂದರ ಶೆಟ್ಲಬೈಲು, ಲಕ್ಷ್ಮೀ ಶೆಟ್ಲಬೈಲು ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಕಚೇರಿ ಸಿಬ್ಬಂದಿ ಕೌಶಿಕ್ ಕುಳ ಸ್ವಾಗತಿಸಿ, ಉದಯಕುಮಾರ್ ಪಿ.ಆರ್.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net