

ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ ಬೇಸರ | ಜಂಗಮಶೆಟ್ಟಿ ರಾಜ್ಯಮಟ್ಟದ ರಂಗ ಪ್ರಶಸ್ತಿ ಪ್ರದಾನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಾಹಿತಿಗಳಾದವರು ಕಲಾವಿದರ ಜವಾಬ್ದಾರಿ ಹೆಚ್ಚಿಸುವಂತೆ ಮಾಡಬೇಕು. ಸಿನಿಮಾ ಮತ್ತು ರಂಗಕ್ಷೇತ್ರದಲ್ಲಿ ಮಾಡುವ ನಟನೆ ಸದ್ಯದ ರಾಜಕೀಯ ಸನ್ನಿವೇಶಗಳಲ್ಲಿ ಕಾಣುತ್ತಿz್ದೆÃವೆ. ದುಷ್ಟ ರಾಜಕೀಯ, ಭ್ರಷ್ಟಾಚಾರ ಸಾರ್ವಜನಿಕರಲ್ಲಿ ಅಸಹ್ಯ ಹುಟ್ಟಿಸಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಬೇಸರ ವ್ಯಕ್ತಪಡಿಸಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸAಗಮ ಕಲಾ ವೇದಿಕೆ ಗುರುವಾರ ಆಯೋಜಿಸಿದ್ದ ಎಸ್.ಬಿ. ಜಂಗಮಶೆಟ್ಟಿ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಮಹಿಳೆ ಬೆತ್ತಲೆ ಮೆರವಣಿಗೆ ಮಾಡುವ ಸಂಗತಿಗಳಿAದ ಅನಾಗರಿಕತೆ ಪ್ರದರ್ಶನವಾಗುತ್ತಿದೆ. ದುಡ್ಡಿದೆ ಎಂದ ಮಾತ್ರಕ್ಕೆ ದೊಡ್ಡವರ ಮದುವೆಗಳು ಪ್ರದರ್ಶನಕ್ಕೆ ಇಟ್ಟಂತಾಗಿವೆ. ಇದನ್ನು ದೃಶ್ಯ ಮಾಧ್ಯಮಗಳು ತೋರಿಸಿ ಗೌರವ ಹಾಳು ಮಾಡಿಕೊಳ್ಳುತ್ತಿವೆ. ಭ್ರಷ್ಟಾಚಾರದಲ್ಲಿ ಜಾತಿ ನುಸುಳಿಸಿ ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ವಿಷಾದಿಸಿದರು.
ರಂಗಸAಗಮ ಕಲಾ ವೇದಿಕೆಯವರು ಹುಡುಕಿಕೊಂಡು ಹೋಗಿ ನಾಟಕದ ಅರ್ಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಸಂಭ್ರಮಿಸುವAತೆ ಮಾಡಿರುವ ಕೆಲಸ ಮೆಚ್ಚುವಂತಹದ್ದು. ಜಂಗಮಶೆಟ್ಟಿ ಕುಟುಂಬದವರು ಗಳಿಸಿದ್ದನ್ನು ನಾಟಕ ಕಲಾವಿದರನ್ನು ಉಳಿಸಿಕೊಳ್ಳಲು ಹಾಕುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬಿಂಬಿಸಿದ್ದು, ಸಮ ಸಮಾಜ ಮತ್ತು ಜ್ಞಾನದ ಪರಿಕಲ್ಪನೆ ತಂದುಕೊಟ್ಟಿರುವುದಕ್ಕೆ ಹೊರತು ಯಾವೊಂದು ಜಾತಿಯನ್ನು ಓಲೈಸಲು ಅಲ್ಲ. ಬಹುತ್ವ ಭಾರತದ ಸಾಂಸ್ಕೃತಿಕ ನಾಯಕ ಬಸವಣ್ಣ ಆಗಬೇಕು ಎಂಬ ಬಲವಾದ ನಂಬಿಕೆ ಹೊಂದಿರುವುದಾಗಿ ಹೇಳಿದ ಅವರು, ಪರಸ್ಪರ ನಂಬಿಕೆ ಉಳಿಸಿಕೊಂಡು ರಂಗಭೂಮಿಯನ್ನು ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ಕರೆ ನೀಡಿದರು.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಶರಣಪ್ಪ ಹಲ್ಸೆ ಮಾತನಾಡಿ, ನಾಟಕ ಕ್ಷೇತ್ರದಲ್ಲಿ ದಯೆ ಮತ್ತು ಧರ್ಮ ಒಳಗೊಂಡಿರಬೇಕು. ರಂಗ ಪ್ರಕ್ರಿಯೆ ಬೆಳವಣಿಗೆ ಕುಂಠಿತವಾಗದAತೆ ಕಲಾವಿದರು ಎಚ್ಚರ ವಹಿಸಬೇಕು. ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಒತ್ತಡದ ಬದುಕಿಗೆ ಸಂಗೀತ, ನಾಟಕಗಳು ಚಿಕಿತ್ಸೆಯಾಗಿ ಪರಿಣಮಿಸುತ್ತವೆ ಎಂದು ಹೇಳಿದರು.
ಸೇಡಂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಂಗಮಶೆಟ್ಟಿ ಕುರಿತು ಚಿಂಚೋಳಿ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರ ಮಹಾದೇವ ಹಂಗರಗಿ ಮಾತನಾಡಿದರು.
ರಂಗ ಪ್ರಶಸ್ತಿ ಪುರಸ್ಕೃತರ ಕುರಿತು ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಪರಿಚಯಿಸಿದರು. ರಂಗಸAಗಮ ಕಲಾ ವೇದಿಕೆ ಅಧ್ಯಕ್ಷೆ ಶಿವಗೀತಾ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ್, ಸದಸ್ಯ ಜೇವರ್ಗಿ ರಾಜಣ್ಣ, ಮಲ್ಲಿಕಾರ್ಜುನ ಮಡ್ಡೆ, ಬಸವಪ್ರಭು, ಸಿದ್ದಪ್ಪ ತಳ್ಳಳ್ಳಿ, ವಿಶ್ವರಾಜ ಇದ್ದರು. ಶಿವಾನಂದ ಅಣಜಗಿ ನಿರೂಪಣೆ ಮಾಡಿದರು.
ಶ್ರೀಧರ ಹೊಸಮನಿ ಮತ್ತು ಸಂಗಡಿಗರಿAದ ಗೀತ ಗಾಯನ ನಡೆಯಿತು. ಎಸ್.ಬಿ. ಜಂಗಮಶೆಟ್ಟಿ ಪ್ರಶಸ್ತಿಯನ್ನು ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿಯನ್ನು ಶಿಗ್ಗಾಂವ್‌ನ ರಾಧಿಕಾ ಬೇವಿನಕಟ್ಟಿ ಸ್ವೀಕರಿಸಿದರು.