ಮಲಗಿದ್ದವರ ಮೇಲೆ ಹುಚ್ಚುನಾಯಿ ದಾಳಿ, ಏಳು ಜನರಿಗೆ ಗಾಯ

210422 Kudligi Jangamasovenahalli Maddog bite
ಜಂಗಮಸೋವೆನಹಳ್ಳಿ ಗ್ರಾಮದಲ್ಲಿ ಕೃಷಿಕನ ಕಾಲನ್ನು ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿರುವುದು.
Published on

ಕೂಡ್ಲಿಗಿ: ತಾಲೂಕಿನ ಜಂಗಮಸೋವೆನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಹುಚ್ಚುನಾಯಿ ಕಡಿತದಿಂದ ಏಳು ಜನ ಗಾಯಗೊಂಡಿದ್ದಾರೆ. ಜನರು ಎಂದಿನಂತೆ ಮಲಗಿರುವ ವೇಳೆ ಏಕಾಏಕಿ ನುಗ್ಗಿ ಬಂದ ಹುಚ್ಚುನಾಯಿ ದಾಳಿ ಮಾಡಿದೆ. ಇದರಿಂದ ಐದು ಮಕ್ಕಳು ಹಾಗೂ ಇಬ್ಬರು ವಯಸ್ಕರು ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ಕೆಲ ದಿನಗಳಿಂದ ಹುಚ್ಚುನಾಯಿ ತಿರುಗಾಡುತ್ತಿದ್ದು, ಗ್ರಾಮದಲ್ಲಿನ ಜನರು, ಮಕ್ಕಳು ಹಾಗೂ ವೃದ್ದರು ಹೊರಗಡೆ ತಿರುಗಾಡಲು ಆತಂಕ ಪಡುವ ಪರಿಸ್ಥಿತಿ ಉದ್ಭವವಾಗಿದೆ. ಹೊಲ, ಗದ್ದೆ ಹಾಗೂ ರೈತರು ಕೃಷಿ ಚಟುವಟಿಕೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಕೂಡಲೇ ಗ್ರಾಪಂ ಅಧಿಕಾರಿಗಳ ಹುಚ್ಚುನಾಯಿಯ ಉಪಟಳವನ್ನು ತಪ್ಪಿಸಲು ಅದನ್ನು ಸೆರೆ ಹಿಡಿಯಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net